

ಮುಂಬೈ: ಗ್ರಾಹಕರನ್ನು ಸೆಳೆಯಲು ಆನ್ ಲೈನ್ ವಹಿವಾಟು ಕಂಪನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿವೆ. ಮೇ ತಿಂಗಳಲ್ಲಿ ಅಮೆಜಾನ್ ಇಂಡಿಯಾ ಕಂಪನಿ ಫ್ಲಿಪ್ ಕಾರ್ಟ್ ಸಮೀಪಕ್ಕೆ ತೆರಳಿದ್ದು ಸ್ನ್ಯಾಪ್‍ಡೀಲ್ ಕಂಪನಿಯನ್ನು ಹಿಂದಿಕ್ಕಿದೆ.
ಮೇ ತಿಂಗಳಲ್ಲಿ ಅಮೆಜಾನ್ ಇಂಡಿಯಾದಲ್ಲಿ 2.36 ಕೋಟಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಿದ್ದರೆ ಫ್ಲಿಪ್ ಕಾರ್ಟ್‍ನಲ್ಲಿ 2.35 ಕೋಟಿ ಮಂದಿ ಖರೀದಿಸಿದ್ದಾರೆ. ಸ್ನಾಪ್‍ಡೀಲ್‍ನಲ್ಲಿ 1.79
ಕೋಟಿ ಮಂದಿ ಉತ್ಪನ್ನ ಖರೀದಿಸಿದ್ದಾರೆ. ವರ್ಷದ ಲೆಕ್ಕದಲ್ಲಿ ಅಮೆಜಾನ್ ಇಂಡಿಯಾ ಸೈಟ್‍ಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಶೇ.142ರಷ್ಟು ಏರಿಕೆ ಕಂಡಿದೆ.