ಗೃಹ ಸಾಲ ಇನ್ನೂ ಸುಲಭ

ರು.10 ಲಕ್ಷದ ವರೆಗಿನ ಗೃಹ ಸಾಲ ಹಾಗೂ ಆಸ್ತಿ ಖರೀದಿ ಸಾಲದ ಮೇಲಿನ ನಿಯಮಾವಳಿಗಳನ್ನು ಸಡಿಲಿಸಿರುವ ಆರ್‌ಬಿಐ, ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನು
ಗೃಹ ಸಾಲ
ಗೃಹ ಸಾಲ
Updated on: 

ಮುಂಬೈ: ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೊಂದು ಖುಷಿಯ ಸುದ್ದಿ!

ರು.10 ಲಕ್ಷದ ವರೆಗಿನ ಗೃಹ ಸಾಲ ಹಾಗೂ ಆಸ್ತಿ ಖರೀದಿ ಸಾಲದ ಮೇಲಿನ ನಿಯಮಾವಳಿಗಳನ್ನು ಸಡಿಲಿಸಿರುವ ಆರ್‌ಬಿಐ, ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನು ಸಾಲದ ಮೊತ್ತದಲ್ಲೇ ಸೇರಿಸುವ ಅವಕಾಶ ಕಲ್ಪಿಸಿದೆ.

ನಿವೇಶನ ಖರೀದಿಸಿ ಮನೆ ಕಟ್ಟುವವರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಯಾಕೆಂದರೆ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಆಸ್ತಿ ಮೌಲ್ಯದ ಶೇ.15ರಷ್ಟಿದೆ.

ಈ ಸಂಬಂಧ ಆರ್‌ಬಿಐ ಗುರುವಾರ ಅಧಿಸೂಚನೆ ಹೊರಡಸಿದೆ. ಆರ್ಥಿಕವಾಗಿ ದುರ್ಬಲರಾಗಿರುವವರು ಮತ್ತು ಕಡಿಮೆ ಆದಾಯ ಹೊಂದಿರುವವರು ಮನೆ ಕಟ್ಟುವ ವೇಳೆ ಸಾಲ ಪಡೆಯುವಾಗ ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನು ಪ್ರತ್ಯೇಕವಾಗಿ ಕಟ್ಟಲು ಪರದಾಡಬೇಕಿತ್ತು. ಆರ್‌ಬಿಐ ಬುಧವಾರವಷ್ಟೇ ಬಡ್ಡಿದರ ಇಳಿಸುವ ಮೂಲಕ ಗೃಹ ಸಾಲದ ಮೇಲಿನ ಮಾಸಿಕ ಕಂತಿನ ಹೊರೆಯನ್ನು ತಗ್ಗಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com