ಸಾರ್ವಜನಿಕ, ಖಾಸಗಿ ಹೂಡಿಕೆಯಲ್ಲಿ ಕುಸಿತದ ಬಗ್ಗೆ ಆರ್ ಬಿ ಐ ಗೌರ್ನರ್ ಆತಂಕ

ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯಲ್ಲಿ ಕುಸಿತ ಕಂಡುಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ) ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಸಾರ್ವಜನಿಕ, ಖಾಸಗಿ ಹೂಡಿಕೆಯಲ್ಲಿ ಕುಸಿತದ ಬಗ್ಗೆ ಆರ್ ಬಿ ಐ ಗೌರ್ನರ್ ಆತಂಕ
Updated on: 

ಹಾಂಗ್ ಕಾಂಗ್: ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯಲ್ಲಿ ಕುಸಿತ ಕಂಡುಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ) ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಹೂಡಿಕೆ ಕುಸಿತ ಕಾಣುತ್ತಿರುವುದು ದೇಶದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಅಭಿವೃದ್ಧಿ ಪ್ರಧಾನ ವಿಷಯದಲ್ಲಿ ಹೂಡಿಕೆ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಹೂಡಿಕೆ ಹಾಗೂ ಬೆಳವಣಿಗೆ ಕಡಿಮೆಯಾಗುತ್ತಿದ್ದರೂ ವಿದೇಶಿ ಹೂಡಿಕೆ ಪ್ರಬಲವಾಗಿರುವುದರಿಂದ ಖಾಸಗಿ ಹೂಡಿಕೆಯನ್ನು ಆಕರ್ಷಿಸಬಹುದು ಎಂದು ರಾಜನ್ ಹೇಳಿದ್ದಾರೆ.
ಬ್ರಿಟನ್ ಪ್ರವಾಸ ಕೈಗೊಂಡಿದ್ದ ವೇಳೆ ಭಾರತದ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.40 ರಷ್ಟು ಏರಿಕೆಯಾಗಿರುವುದು ಭಾರತದ ಬೆಳವಣಿಗೆ ಉತ್ತಮಗತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದರು.
ಪ್ರಸಕ್ತ ಸಾಲಿನ ಬೆಳವಣಿಗೆ ಮುನ್ನೋಟ ಬಿಡುಗಡೆ ಮಾಡಿದ್ದ ಆರ್.ಬಿ.ಐ, ಬೆಳವಣಿಗೆ ದರವನ್ನು ಶೇ.7 .6 ರಿಂದ ಶೇ.7 .4 ಕ್ಕೆ ಇಳಿಕೆ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com