ನವದೆಹಲಿ: ದೇಶದ ಯುವಜನ (16ರಿಂದ 30 ವರ್ಷದೊಳಗಿನವರು) ತಮ್ಮ ಮೊಬೈಲ್‍ಗಳಲ್ಲಿ ದಿನಕ್ಕೆ ಸರಾಸರಿ 2.20 ಗಂಟೆ ಕಳೆಯುತ್ತಿದ್ದಾರೆ. ಅಂದರೆ ವಾರ್ಷಿಕ 34 ದಿನ ಕಳೆಯುತ್ತಿದ್ದಾರೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ ಟಿಎನ್‍ಎಸ್ ಹೇಳಿದೆ.
ಜಗತ್ತಿನಾದ್ಯಂತ ಇಂಟರ್‍ನೆಟ್ ಸಂಪರ್ಕ ಹೊಂದಿರುವ 60 ಸಾವಿರ ಯುವಕರನ್ನು ಸಮೀಕ್ಷೆ ನಡೆಸಿದೆ. ಜಾಗತಿಕ ಸರಾಸರಿ 3.20 ಗಂಟೆ ಇದೆ. 31ರಿಂದ 45ವರ್ಷದೊಳಗಿನವರು ಸರಾಸರಿ 1.8 ಗಂಟೆ ಮತ್ತು 46ರಿಂದ 65 ವರ್ಷದೊಳಗಿನವರು 1.5ಗಂಟೆ ಕಳೆಯುತ್ತಿದ್ದಾರೆ.
ಭಾರತದ ಯುವಕರಲ್ಲಿ ಶೇ.80ಕ್ಕಿಂತಲೂ ಹೆಚ್ಚು ಮಂದಿ ಸ್ಮಾರ್ಟ್‍ಫೋನ್ ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.