ಷೇರು ಸೂಚ್ಯಂಕ ಏರಿಕೆ

ಸೋಮವಾರವಷ್ಟೇ ಕುಸಿತ ಕಂಡಿದ್ದ ಸೆನ್ಸೆಕ್ಸ್ ಮಂಗಳವಾರ ದಿಡೀರ್ ಏರಿಕೆಯಾಗಿದೆ...
ಸೆನ್ಸೆಕ್ಸ್
ಸೆನ್ಸೆಕ್ಸ್
Updated on: 
ಮುಂಬೈ: ಸೋಮವಾರವಷ್ಟೇ ಕುಸಿತ ಕಂಡಿದ್ದ ಸೆನ್ಸೆಕ್ಸ್ ಮಂಗಳವಾರ ದಿಡೀರ್ ಏರಿಕೆಯಾಗಿದೆ. 
ದಿನದ ಅಂತ್ಯಕ್ಕೆ 424.06ರಷ್ಟು ಅಂಕ ಏರಿಕೆ ಕಂಡ ಸೆನ್ಸೆಕ್ಸ್ 25,317.87ಕ್ಕೆ ಕೊನೆ ಗೊಂಡಿತು. ಇದರ ಜತೆಗೆ ನಿಫ್ಟಿ ಕೂಡ ಏರಿಕೆಯಾಗಿದ್ದು, 129.45 ಅಂಶಗಳೊಂದಿಗೆ 7,688ಕ್ಕೆ ಕೊನೆಗೊಂಡಿದೆ. ಮಂಗಳವಾರ ಚೇತರಿಕೆ ಕಂಡ ಸೂಚ್ಯಂಕ 25 ಸಾವಿರದ ಗಡಿ ದಾಟಿತು. ಚೀನಾದ ಪ್ರಗತಿ ಕುಸಿಯುತ್ತಿರುವುದು ಸೂಚ್ಯಂಕ ಏರಿಕೆಗೆ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ. 
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರಮುಖ ಕಂಪನಿಗಳ ಸಿಇಒಗಳು, ಬ್ಯಾಂಕರ್‍ಗಳು, ಆರ್ಥಶಾಸ್ತ್ರಜ್ಞರು ಮತ್ತು ಸಚಿವರ ಸಭೆ ನಡೆಸಿದ್ದರು. ಚೀನಾದ ಆರ್ಥಿಕ ಪ್ರಗತಿ ಕುಸಿತ ಮತ್ತು ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೇ ಭಾರತದ ಪ್ರಗತಿ ಸಾಧಿಸುವ ಕುರಿತು ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರು ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರು. ಈ ಬೆಳವಣಿಗೆ ಸೂಚ್ಯಂಕ ಏರಿಕೆಗೆ ಪೂರಕವಾಗಿತ್ತು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ನಡುವೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ ಏರಿಕೆಯಾಗಿದೆ. 129.45 ಅಂಶಗಳ ಏರಿಕೆಯೊಂದಿಗೆ 7,688.25 ತಲುಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com