ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಿಟೇಲ್, ಹೋಲ್‍ಸೇಲ್ ಇಳಿಮುಖ

ಆಗಸ್ಟ್ ತಿಂಗಳಲ್ಲಿ ಸಗಟು ಮತ್ತು ರೀಟೇಲ್ ಆಧರಿತ ಹಣದುಬ್ಬರ ಪ್ರಮಾಣಗಳೆರಡೂ ಇಳಿಮುಖ ಕಂಡಿವೆ...

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸಗಟು ಮತ್ತು ರೀಟೇಲ್ ಆಧರಿತ ಹಣದುಬ್ಬರ ಪ್ರಮಾಣಗಳೆರಡೂ ಇಳಿಮುಖ ಕಂಡಿವೆ. ಉತ್ಪನ್ನಗಳ ದರಗಳಿಗೆ ಸಂಬಂಧಿಸಿದಂತೆ ಇದು ಗ್ರಾಹಕರಿಗೆ ಒಳ್ಳೆಯ ಸುದ್ದಿಯೇ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಸಹ ನಿಧಾನಗತಿಯಲ್ಲಿ ಪ್ರಗತಿಯತ್ತ ಸಾಗಿದೆ. ಆರ್ಥಿಕ ವ್ಯವಸ್ಥೆಯಲ್ಲಿನ ಈ ಬೆಳವಣಿಗೆ ಗಳಿಂದಾಗಿ ಆರ್ ಟಿಐ ತನ್ನ ಪ್ರಮುಖ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಲಿದೆ ಎಂಬ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಸೋಮವಾರ ಆಗಸ್ಟ್ ತಿಂಗಳ ರಿಟೇಲ್ ಮತ್ತು ಸಗಟು ದರ ಆಧರಿತ ಹಣದುಬ್ಬರ ಅಂಕಿಅಂಶಗಳು ಬಿಡುಗಡೆಯಾಗಿವೆ. ಸಗಟು ದರ ಆಧರಿತ ಹಣದುಬ್ಬರ ಪ್ರಮಾಣ ಮತ್ತೆ ನೇತ್ಯಾತ್ಮಕ ವಲಯದಲ್ಲಿ ಸಾಗಿದ್ದರೆ ರಿಟೇಲ್ ಹಣದುಬ್ಬರ ಸಂಯಮದ ಮಟ್ಟದಲ್ಲಿದೆ. ಗ್ರಾಹಕರನ್ನು ನೇರವಾಗಿ ಬಾಧಿಸುವ ರಿಟೇಲ್ ಹಣದುಬ್ಬರ ಪ್ರಮಾಣ ಶೇ.3.66ರಷ್ಟಿದೆ. ಜುಲೈನಲ್ಲಿ ಈ ಪ್ರಮಾಣ ಶೇ.3.78ರಷ್ಟಿದ್ದರೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶೇ.7.03ರಷ್ಟಿತ್ತು. ಆದರೂ ಆಗಸ್ಟ್ ತಿಂಗಳಲ್ಲಿ ಆಹಾರ ದುಬ್ಬರ ಪ್ರಮಾಣ ಸ್ವಲ್ಪ ಏರಿಕೆ ಕಂಡಿದ್ದು ಜುಲೈನಲ್ಲಿ ಶೇ.2.15ರಷ್ಟು ಇದ್ದದು 2.20ಕ್ಕೆ ಏರಿದೆ.
ಸಗಟು ದರ ಆಧರಿತ ಹಣದುಬ್ಬರ ಪ್ರಮಾಣ ಸತತವಾಗಿ ನೇತ್ಯಾತ್ಮಕ ವಲಯದಲ್ಲಿ ಸಾಗಿದೆ. ಜುಲೈನಲ್ಲಿ ಶೇ.4.05 ಇದ್ದದು ಆಗಸ್ಟ್‍ನಲ್ಲಿ ಮತ್ತಷ್ಟು ಕುಸಿದು ಶೇ.4.66ಕ್ಕೆ ಇಳಿದಿದೆ. ಇದರೊಂದಿಗೆ ಕಳೆದ ಹತ್ತು ತಿಂಗಳಿನಿಂದಲೂ ಸಗಟು ದರ ಆಧರಿತ ಹಣದುಬ್ಬರ ಪ್ರಮಾಣ ನೆಗೆಟಿವ್ ವಲಯದಲ್ಲಿ ಮುಂದುವರೆದಿದೆ. ಆಗಸ್ಟ್ ತಿಂಗಳಲ್ಲಿ ಈರುಳ್ಳಿ ಮತ್ತು ಕೆಲವು ಬೇಳೆ ಕಾಳುಗಳನ್ನು ಹೊರತುಪಡಿಸಿದರೆ ಬಹುತೇಕ ಉತ್ಪನ್ನಗಳ ದರಗಳು ಗಣನೀಯ ಇಳಿಮುಖ ಕಂಡಿವೆ.ಈರುಳ್ಳಿ ಮತ್ತು ಬೇಳೆಕಾಳುಗಳ ಹಣದುಬ್ಬರ ಪ್ರಮಾಣ ಕ್ರಮವಾಗಿ ಶೇ.65.29 ಮತ್ತು ಶೇ.36-40ರಷ್ಟಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ತಿಳಿದುಬಂದಿದೆ. ಒಟ್ಟಾರೆ ಆಹಾರ ಉತ್ಪನ್ನಗಳು ಸತತ ಎರಡನೇ ತಿಂಗಳು ನೇತ್ಯಾತ್ಮಕ ವಲಯದಲ್ಲಿವೆ. ತರಕಾರಿ ದರಗಳ ಹಣದುಬ್ಬರ ಪ್ರಮಾಣ ಶೇ.21.21ಕ್ಕೆ ಇಳಿದಿದೆ. ವಿದ್ಯುತ್, ಇಂಧನ ದರಗಳೂ ಇಳಿಮುಖ ಕಂಡಿವೆ.

Related Stories

No stories found.

Advertisement

X
Kannada Prabha
www.kannadaprabha.com