ರು.400 ಏರಿದ ಚಿನ್ನ

ಸತತ ಮೂರನೆ ದಿನ ಏರಿಕೆ ಮುಂದುವರೆಸಿರುವ ಚಿನ್ನ ಶುಕ್ರವಾರದ ವಹಿವಾಟಿನಲ್ಲಿ ರು.400 ಏರಿಕೆ ಕಾಣುವುದರೊಂದಿಗೆ ರು.27,250ಕ್ಕೆ ತಲುಪಿತು...
ಚಿನ್ನದ ದರ ಏರಿಕೆ (ಸಂಗ್ರಹ ಚಿತ್ರ)
ಚಿನ್ನದ ದರ ಏರಿಕೆ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಸತತ ಮೂರನೆ ದಿನ ಏರಿಕೆ ಮುಂದುವರೆಸಿರುವ ಚಿನ್ನ ಶುಕ್ರವಾರದ ವಹಿವಾಟಿನಲ್ಲಿ ರು.400 ಏರಿಕೆ ಕಾಣುವುದರೊಂದಿಗೆ ರು.27,250ಕ್ಕೆ ತಲುಪಿತು.

ಕಳೆದ ಒಂದು ತಿಂಗಳಲ್ಲೇ ಇದು ಚಿನ್ನದ ಗರಿಷ್ಠ ದರವಾಗಿದೆ. ಮದುವೆ ಸೀಸನ್‍ಗಾಗಿ ಆಭರಣ ತಯಾರಕರು ಹೆಚ್ಚಿನ ಖರೀದಿಯಲ್ಲಿ ತೊಡಗಿದ್ದರಿಂದ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಕೆ  ಕಂಡಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲೂ ದರಗಳು ಗಗನ ಮುಖಿಯಾಗಿದ್ದವು. ಪ್ರತಿ ಕೆಜಿ ಬೆಳ್ಳಿ ದರವೂ ರು.1,100 ಏರಿಕೆ ಕಂಡು ರು.36,500ಕ್ಕೆ ತಲುಪಿತು. ಕೈಗಾರಿಕೋದ್ಯಮಿಗಳು ಮತ್ತು   ನಾಣ್ಯ ತಯಾರಕರು ಹೆಚ್ಚಿನ ಖರೀದಿಯಲ್ಲಿ ತೊಡಗಿದ್ದರು.

ರುಪಾಯಿ ಮೌಲ್ಯ ಇನ್ನಷ್ಟು ಕುಸಿದಿದ್ದರಿಂದ ಚಿನ್ನದ ಆಮದು ದರಗಳು ಹೆಚ್ಚಾಗುವ ಕಾರಣವೂ ಚಿನ್ನ ಮತ್ತು ಬೆಳ್ಳಿ ದರಗಳು ಹೆಚ್ಚಲು ಕಾರಣವಾಯಿತು ಎಂದು ಮಾರುಕಟ್ಟೆ ವಿಶ್ಲೇಷಕರು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com