

ಮುಂಬೈ:ರಿಸರ್ವ್ ಬ್ಯಾಂಕ್ ತನ್ನ ನೀತಿಯನ್ನು ಪ್ರಕಟಿಸಿದ್ದು, ನಿರೀಕ್ಷೆಯಂತೆಯೇ ಬಡ್ಡಿ ದರ ಕಡಿತ ರೆಪೋ ದರವನ್ನು ಇಳಿಕೆ ಮಾಡಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್, ರೆಪೋದರವನ್ನು ಶೇ.0 .5 ರಷ್ಟು(50 ಬೇಸಿಸ್ ಪಾಯಿಂಟ್) ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಶೇ.4 ರಷ್ಟಿದ್ದ ಸಿ.ಆರ್.ಆರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಶೇ.7 .25 ರಷ್ಟಿದ್ದ ರೆಪೋದರ ರಿಸರ್ವ್ ಬ್ಯಾಂಕ್ ನೀತಿ ಪರಾಮರ್ಶೆ ನಂತರ ಶೇ.6 .75 ರಷ್ಟಾಗಿದ್ದು ವಾಹನ ಹಾಗೂ ಗೃಹ ಸಾಲ ದರ ಅಗ್ಗವಾಗಿದೆ.
ಮಧ್ಯಮ ಹಣದುಬ್ಬರದ ಮಟ್ಟ, ಹಾಗೂ ಅಮೇರಿಕಾದ ಫೆಡರಲ್ ರಿಸರ್ವ್( ವಿದೇಶಿ ವಿನಿಮಯ ಮೀಸಲು) ಯಥಾಸ್ಥಿತಿಯಲ್ಲಿ ಮುಂದುವರೆದಿರುವುದು ಹಾಗೂ ಆರ್ಥಿಕ ಚೇತರಿಕೆ ಉತ್ತೇಜಿಸುವ ಅಗತ್ಯತೆ ಈ ಎಲ್ಲಾ ಅಂಶಗಳಿಂದ ರಘುರಾಮ್ ರಾಜನ್ ಬಡ್ಡಿ ದರವನ್ನು ಇಳಿಕೆ ಮಾಡಿದ್ದಾರೆ. ಜನವರಿ 2016 ವೇಳೆಗೆ ಹಣದುಬ್ಬರ ದರ 5 .8 ನ್ನು ತಲುಪುವ ನಿರೀಕ್ಷೆ ಇದೆ ಎಂದು ರಘುರಾನ್ ರಾಜನ್ ಹೇಳಿದ್ದಾರೆ.