ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆಯಂತೆ ಬ್ಯಾಂಕ್ ಗಳು ಹೊಸ ಸೂತ್ರವನ್ನು ಅಳವಡಿಸಿಕೊಂಡಿದ್ದು, ಇನ್ನು ಮುಂದೆ ಗ್ರಾಹಕ ಸಾಲ ಅಗ್ಗವಾಗಲಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬ್ಯಾಂಕ್ ಗಳು ಗ್ರಾಹಕ ಸಾಲಗಳ ಮೇಲಿನ ಬಡ್ಡಿ ದರ ನಿಗದಿಗೆ ಹೊಸ ಸೂತ್ರವನ್ನು ಅಳವಡಿಸಿಕೊಂಡಿವೆ. ಮಾರ್ಜಿನಲ್ ಕಾಸ್ಚ್ ಆಫ್ ಫಂಡ್ಸ್ ಆಧರಿತ ಬಡ್ಡಿದರವನ್ನು ಅಳವಡಿಸಿಕೊಳ್ಳುವುದರಿಂದ ಗ್ರಾಹಕ ಸಾಲ ಅಗ್ಗವಾಗಲಿದೆ.
ಏಪ್ರಿಲ್ 1ರಿಂದ ಅನ್ವಯಿಸುವಂತೆ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚದ ಮೇಲೆ ಬಡ್ಡಿದರವನ್ನು ನಿಗದಿಮಾಡುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಬಡ್ಡಿದರಗಳಲ್ಲಿ ಬದಲಾವಣೆ ಮಾಡಿದೆ.
ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ ಬಿಐ), ಎಚ್ ಡಿಎಫ್ ಸಿ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಕ್ ಆಫ್ ಬರೋಡ, ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಗಳು ಈ ಹೊಸ ಸೂತ್ರವನ್ನು ಅಳವಡಿಸಿಕೊಂಡಿವೆ.
ಈ ಹೊಸ ಸೂತ್ರವನ್ನು ಅಳವಡಿಸಿಕೊಂಡರೆ, ಹೊಸ ಬಡ್ಡಿ ದರಗಳು ಕೆಲ ಗ್ರಾಹಕ ಸಾಲಗಳಿಗೆ ಸಂಬಂಧಿಸಿದಂತೆ ಈ ಮೊದಲಿನ ಮೂಲ ದರಕ್ಕಿಂತ ಶೇ.1ರಷ್ಟು ಕಡಿಮೆ ಇರಲಿದೆ ಎಂದು ಪರಿಣಿತರು ಹೇಳಿದ್ದಾರೆ.