

ಮುಂಬೈ: ತೀರಾ ಅಗ್ಗದ 3ಜಿ ಮತ್ತು 4ಜಿ ಡಾಟಾ ಸೇವೆ ಒದಗಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್ ಸಂಸ್ಥೆಯ ಜಿಯೋ ಸೇವೆಯನ್ನು ಮತ್ತಷ್ಟು ಮೊಬೈಲ್ ಗಳಿಗೆ ಒದಗಿಸುವುದಾಗಿ ರಿಲಯನ್ಸ್ ತಿಳಿಸಿದೆ.
ರಿಲಯನ್ಸ್ ಜಿಯೋ ಸಿಮ್ ಗಾಗಿ ರಿಲಯನ್ಸ್ ಡಿಜಿಟಲ್ ಕಚೇರಿಗಳ ಮುಂದೆ ಗ್ರಾಹಕರ ದಟ್ಟಣೆ ಮುಂದುವರೆದಿರುವಂತೆಯೇ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಯೋಜನೆಯನ್ನು ಮತ್ತಷ್ಟು ಆ್ಯಂಡ್ರಾಯ್ಡ್ ಫೋನ್ ಗಳಿಗೆ ವಿಸ್ತರಿಸಿದೆ. ಈ ಹಿಂದೆ ಘೋಷಣೆ ಮಾಡಿದ್ದ ಅದೇ ಅಗ್ಗದ ದರದ ಇಂಟರ್ ನೆಟ್ ಡಾಟಾ ಯೋಜನೆಗಳನ್ನು ಸೋನಿ, ವಿಡಿಯೋಕಾನ್ ಸೇರಿದಂತೆ ಮತ್ತಷ್ಟು ಮೊಬೈಲ್ ಫೋನ್ ಗಳಿಗೆ ವಿಸ್ತರಿಸುವ ಮೂಲಕ ತನ್ನ ಮಾರುಕಟ್ಟೆ ವಿಸ್ತರಣೆಗೆ ರಿಲಯನ್ಸ್ ಮಾಸ್ಟರ್ ಪ್ಲಾನ್ ರೂಪಿಸಿದೆ.
ಈ ಹಿಂದೆ ರಿಲಯನ್ಸ್ ಸಂಸ್ಥೆಯ ಫೋನ್ ಗಳಿಗೆ ಮಾತ್ರ ಸೀಮಿತವಾಗಿದ್ದ ಜಿಯೋ ಸೇವೆ ಇದೀಗ ಮಾರುಕಟ್ಟೆಯ ಖ್ಯಾತನಾಮ ಆ್ಯಂಡ್ರಾಯ್ಡ್ ಫೋನ್ ಗಳಿಗೂ ವಿಸ್ತರಣೆಯಾಗಿದೆ. ಪ್ರಸ್ತುತ ರಿಲಯನ್ಸ್ ಜಿಯೋ ಸೇವೆ ವಿಸ್ತರಣೆಯಾಗಿರುವ ಆ್ಯಂಡ್ರಾಯ್ಡ್ ಫೋನ್ ಗಳ ವಿವರ ಇಲ್ಲಿದೆ.
ಸೋನಿ ಸ್ಮಾರ್ಟ್ ಫೋನ್ ಗಳು
ಎಕ್ಸ್ ಪೀರಿಯಾ ಎಕ್ಸ್ ಎ, ಎಕ್ಸ್ ಪೀರಿಯಾ ಎಕ್ಸ್ ಎ ಅಲ್ಟ್ರಾ, ಎಕ್ಸ್ ಪೀರಿಯಾ ಎಕ್ಸ್ (ಎಫ್5122), ಎಕ್ಸ್ ಪೀರಿಯಾ ಝೆಡ್5 ಡ್ಯುಯಲ್ (ಇ6883), ಎಕ್ಸ್ ಪೀರಿಯಾ ಝೆಡ್5 ಪ್ರೀಮಿಯಮ್ ಡ್ಯುಯಲ್
ವಿಡಿಯೋಕಾನ್
ಗ್ರಾಫೈಟ್ 1 ವಿ45ಇಡಿ, ಕ್ರಿಪ್ಟನ್ 3 ವಿ50ಜೆಜಿ, ಕ್ಯೂ1, ವಿ50ಎಫ್ಎ3, ವಿ50ಎಫ್ ಜಿ6
ಸ್ಯಾನ್ ಸುಯ್
ಎಸ್ 50 ಎಫ್ ಡಿ45ಎಸ್
ಈ ಮೇಲ್ಕಂಡ ಮೊಬೈಲ್ ಗಳಲ್ಲಿ ನಿಮ್ಮದೂ ಒಂದಾಗಿದ್ದರೂ ನೀವು ಉಚಿತ ಜಿಯೋ ಸಿಮ್ ಪಡೆಯಲ ಅರ್ಹರಾಗಿದ್ದು, ಸಮೀಪದ ರಿಲಯನ್ಸ್ ಡಿಜಿಟಲ್, ಡಿಜಿಟಲ್ ಎಕ್ಸ್ ಪ್ರೆಸ್ ಹಾಗೂ ಡಿಜಿಟಲ್ ಎಕ್ಸ್ ಪ್ರೆಸ್ ಮಿನಿ ಕಚೇರಿಗೆ ಹೋಗಿ ನಿಮ್ಮ ಕೆವೈಸಿ ಮಾಹಿತಿ ನೀಡಿ ಸಿಮ್ ಪಡೆಯಬಹುದಾಗಿದೆ.