ಸ್ನ್ಯಾಪ್ ಡೀಲ್ ನಿಂದ ನಿಮ್ಮ ಮನೆಗೆ ಬರಲಿದೆ ಹಣ!

ಹೌದು.. ಇದು ಅಚ್ಚರಿ ಅನಿಸಿದರು ನಿಜ. ಇಷ್ಟು ದಿನ ನಿಮ್ಮ ಮನೆಗೆ ಬಾಗಿಲಿಗೆ ನೀವು ಬೂಕ್ ಮಾಡಿದ ವಸ್ತುಗಳನ್ನು ತಲುಪಿಸುತ್ತಿದ್ದ ಇ-ಕಾಮರ್ಸ್ ಕಂಪನಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹೌದು.. ಇದು ಅಚ್ಚರಿ ಅನಿಸಿದರು ನಿಜ. ಇಷ್ಟು ದಿನ ನಿಮ್ಮ ಮನೆಗೆ ಬಾಗಿಲಿಗೆ ನೀವು ಬೂಕ್ ಮಾಡಿದ ವಸ್ತುಗಳನ್ನು ತಲುಪಿಸುತ್ತಿದ್ದ ಇ-ಕಾಮರ್ಸ್ ಕಂಪನಿ ಸ್ನ್ಯಾಪ್ ಡೀಲ್ ಇದೀಗ ನಿಮ್ಮ ಮನೆಗೆ ಹಣ ತಲುಪಿಸುವುದಾಗಿ ಗುರುವಾರ ಘೋಷಿಸಿದೆ.
ಸ್ನ್ಯಾಪ್ ಡೀಲ್ 'Cash@Home' ಸೇವೆ ಆರಂಭಿಸಿದ್ದು, ಆರ್ಡರ್ ಮಾಡಿದರೆ 2000 ರುಪಾಯಿ ನಗದನ್ನು ನಿಮ್ಮ ಮನೆಗೆ ತಲುಪಿಸಲಿದೆ.
ನೋಟ್ ನಿಷೇಧದಿಂದಾಗಿ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, 'Cash@Home' ಸೇವೆ ನಮ್ಮ ಗ್ರಾಹಕರ ದೈನಿಂದ ಅಗತ್ಯಗಳಿಗಾಗಿ ಹಣದ ಬೇಡಿಕೆಯನ್ನು ಈಡೇರಿಸಲಿದೆ ಎಂದು ಸ್ನ್ಯಾಪ್ ಡೀಲ್ ಸಹ ಸಂಸ್ಥಾಪಕ ರೋಹಿತ್ ಹನ್ಸಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸೇವೆಗಾಗಿ ಸ್ನ್ಯಾಪ್ ಡೀಲ್ ಸಾಗಣೆ ವೆಚ್ಚವಾಗಿ ಕನಿಷ್ಠ 1 ರುಪಾಯಿ ಶುಲ್ಕ ವಿಧಿಸಲಾಗುತ್ತಿದ್ದು, ಇದು ನೀವೂ ಬೂಕ್ ಮಾಡುವ ಡೆಬಿಟ್ ಕಾರ್ಡ್ ಮೂಲಕ ಪಡೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಿಒಎಸ್ ಮಷಿನ್ ನೊಂದಿಗೆ ಸ್ನ್ಯಾನ್ ಡೀಲ್ ಗ್ರಾಹಕರು ನಿಮ್ಮ ಮನಗೆ ಬರಲಿದ್ದು, ಈ ವೇಳೆ ನೀವು ನಿಮ್ಮ ಎಟಿಎಂ ಸ್ವೈಪ್ ಮಾಡಿ ಹಣ ಪಡೆದುಕೊಳ್ಳಬಹುದಾಗಿದೆ.
ಈ ಸೇವೆ ಈಗಾಗಲೇ ಬೆಂಗಳೂರು ಹಾಗೂ ಗುರುಗಾಂವ ನಲ್ಲಿ ಚಾಲ್ತಿಯಲ್ಲಿದ್ದು, ಮತ್ತಷ್ಟು ನಗರಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com