

ಮುಂಬೈ: ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ 3ನೇ ದಿನವೂ ಇಳಿಕೆ ಕಂಡಿದ್ದು, ಬುಧವಾರದ ವಹಿವಾಟಿನಲ್ಲಿ 174 ಅಂಕಗಳನ್ನು ಕಳೆದುಕೊಂಡಿದೆ.
ಜಾಗತಕಿ ಮಾರುಕಟ್ಟೆಯಲ್ಲಿ ನಿರಾಶಾದಾಯಕ ವಹಿವಾಟಿ ಮುಂದುವರೆದಿದ್ದು, ಇದರ ಪರಿಣಾಮ ಭಾರತೀಯ ಷೇರುಮಾಕಟ್ಟೆಯ ಮೇಲೂ ಅಗಿದೆ. ಬುಧವಾರ ಒಟ್ಟಾರೆ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 174 ಅಂಕಗಳ ಇಳಿಕೆಯೊಂದಿಗೆ 25, 406 ಅಂಕಗಳಿಗೆ ಸ್ಥಿರವಾಗಿದೆ. ಇನ್ನು ನಿಫ್ಟಿ ಕೂಡ 43.65 ಅಂಕಗಳ ಇಳಿಕೆಯೊಂದಿಗೆ 7, 750 ಅಂಕಗಳಿಗೆ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಹೆಚ್ಚಾಗಿ ಉಕ್ಕು ವಿಭಾಗದ ಸಂಸ್ಥೆಗಳಿಗೆ ನಷ್ಟವಾಗಿದ್ದು, ಐಟಿಸಿ ಸಂಸ್ಥೆಯ ಷೇರುಗಳ ಮೌಲ್ಯ ಶೇ.3ರಷ್ಟು ಕುಸಿದಿದೆ. ಉಳಿದಂತೆ ವೆದಾಂತ, ಟಾಟಾ ಸ್ಟ್ಲೀಲ್ಸ್, ಹಿಂಡಾಲ್ಕೋ ಸಂಸ್ಥೆಗಳಿಗೆ ಶೇ.2 ರಿಂದ 4 ರಷ್ಟು ನಷ್ಟವಾಗಿದೆ. ನಿಫ್ಚಿ ನಶ್ಟದ ಪಟ್ಟಿಯಲ್ಲಿ ವೆದಾಂತ ಸಂಸ್ಥೆ ಅಗ್ರ ಸ್ಥಾನದಲ್ಲಿದ್ದು, ಐಸಿಐಸಿಐ ಬ್ಯಾಂಕ್ , ಟಾಟಾ ಮೋಟರ್ಸ್, ಮಾರುತಿ ಸುಜುಕಿ, ಮಹೀಂದ್ರ ಮತ್ತು ಮಹೀಂದ್ರ, ಒಎನ್ ಜಿಸಿ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ. 1.5ರಿಂದ 3 ರಷ್ಟು ಇಳಿಕೆ ಕಂಡುಬಂದಿದೆ.
ಇಂದಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಷೇರು ಮೌಲ್ಯ ಮಾತ್ರ ಶೇ.2.69ರಷ್ಚು ಏರಿಕೆ ಕಂಡಿದೆ.