ಮುಂಬೈ: ಭಾರಿ ನಿರೀಕ್ಷೆ ಹೊಂದಿದ್ದ ಅಮೆರಿಕಾದ 'ಆನ್ ಡಿಮ್ಯಾಂಡ್ ಸ್ಟ್ರೀಮಿಂಗ್' ಸೇವೆ ನೆಟ್ ಫ್ಲಿಕ್ಸ್ ಭಾರತಕ್ಕೆ ಕಾಲಿಟ್ಟಿದೆ. ಯಾವುದೇ ಚಂದಾ ನೀಡದೆ ಒಂದು ತಿಂಗಳು ಉಚಿತವಾಗಿ ಈ ಸೇವೆಯನ್ನು ಬಳಸಬಹುದಾಗಿದೆ.
ಒಂದು ತಿಂಗಳ ನಂತರ ೫೦೦ ರೂ, ೬೫೦ ರೂ ಅಥವಾ ೮೦೦ ರೂ ಗಳ ವಿವಿಧ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇದಕ್ಕೆ ಚಂದಾದಾರಾಗುವ ಮೂಲಕ ಟಿವಿ ಕಾರ್ಯಕ್ರಮಗಳು, ಸಿನೆಮಾಗಳು, ಧಾರಾವಾಹಿಗಳನ್ನು ಅಂತರ್ಜಾಲದಲ್ಲಿ ನೋಡಬಹುದಾಗಿದೆ. ಬಳಕೆದಾರರು ಯಾವಾಗ ಬೇಕಾದರು ಈ ಚಂದಾವನ್ನು ರದ್ದು ಮಾಡಿಕೊಳ್ಳುವ ಅವಕಾಶವಿದೆ.
ಅಂತರ್ಜಾಲ ಸಂಪರ್ಕ ಹೊಂದಿರುವ ಯಾವುದೇ ಉಪಕರಣದಲ್ಲಿ ಅಂದರೆ ಮೊಬೈಲ್ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ಟಿವಿಗಳಲ್ಲಿ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.