

ಮುಂಬೈ: ನೋಟುಗಳು ಅಸಲಿ ಎಂದು ಸಾಬೀತುಪಡಿಸುವ ಬೆಳ್ಳಿಯ ಎಳೆ ಇಲ್ಲದ ರು.1,000 ಮುಖ ಬೆಲೆಯ ನೋಟುಗಳು ಕಣ್ತಪ್ಪಿನಿಂದ ಚಾಲ್ತಿಗೆ ಬಂದಿರುವುದಾಗಿ ಆರ್‍ಬಿಐ ಒಪ್ಪಿಕೊಂಡಿದೆ.
5ಎಜಿ ಮತ್ತು 3ಎಪಿ ಸರಣಿಯ ನೋಟುಗಳು ಬೆಳ್ಳಿ ಎಳೆ ಇಲ್ಲದೆಂಯೇ ಮಧ್ಯಪ್ರದೇಶದ ಹೋಶಂಗಾಬಾದ್‍ನ ಪ್ರೆಸ್‍ನಲ್ಲಿ ಮುದ್ರಣವಾಗಿ ಹಂಚಿಕೆಯಾಗಿವೆ. ಆದರೆ ಎಷ್ಟು ಮೌಲ್ಯದ ನೋಟುಗಳು ಚಲಾವಣೆಯಾಗಿದೆ ಎಂದು ತಿಳಿದು ಬಂದಿಲ್ಲ ಎಂದು `ಸಿಎನ್‍ಎನ್ ಐಬಿಎನ್' ವರದಿ ಮಾಡಿದೆ. ಬೆಳ್ಳಿ ಎಳೆ ಇಲ್ಲದಿದ್ದರೆ ನೋಟುಗಳಿಗೆ ಮಾನ್ಯತೆ ಇರುವುದಿಲ್ಲ. ಸಾರ್ವಜನಿಕರು ಇಂಥ ನೋಟುಗಳನ್ನು ಬ್ಯಾಂಕ್‍ಗಳಿಗೆ ತೆಗೆದುಕೊಂಡು ಬಂದಲ್ಲಿ ಅವುಗಳನ್ನು ಬದಲಾಯಿಸಿಕೊಡಬೇಕೆಂದು ಆರ್‍ಬಿಐ ಸೂಚನೆ ನೀಡಿದೆ.