ಬ್ರಿಟನ್ ಟಾಟಾ ಸ್ಟೀಲ್‌ ನ್ನು ಖರೀದಿಸಲು ಭಾರತೀಯ ಸಂಜಾತ ಉದ್ಯಮಿಯಿಂದ ಬಿಡ್
ಬ್ರಿಟನ್ ಟಾಟಾ ಸ್ಟೀಲ್‌ ನ್ನು ಖರೀದಿಸಲು ಭಾರತೀಯ ಸಂಜಾತ ಉದ್ಯಮಿಯಿಂದ ಬಿಡ್

ಬ್ರಿಟನ್ ಟಾಟಾ ಸ್ಟೀಲ್‌ ನ್ನು ಖರೀದಿಸಲು ಭಾರತೀಯ ಸಂಜಾತ ಉದ್ಯಮಿಯಿಂದ ಬಿಡ್

ಭಾರತೀಯ ಸಂಜಾತ ಉದ್ಯಮಿ ಸಂಜೀವ್ ಕುಮಾರ್ ಗುಪ್ತಾ ಯುಕೆಯಲ್ಲಿರುವ ಟಾಟಾ ಸ್ಟೀಲ್ ಘಟಕವನ್ನು ಖರೀದಿಸಲು ಮುಂದಾಗಿದ್ದು ಅಧಿಕೃತವಾಗಿ ಬಿಡ್ ಸಲ್ಲಿಸಲಾಗಿದೆ.

ಲಂಡನ್: ಭಾರತೀಯ ಸಂಜಾತ ಉದ್ಯಮಿ ಸಂಜೀವ್ ಕುಮಾರ್ ಗುಪ್ತಾ ಯುಕೆಯಲ್ಲಿರುವ ಟಾಟಾ ಸ್ಟೀಲ್ ಘಟಕವನ್ನು ಖರೀದಿಸಲು ಮುಂದಾಗಿದ್ದು ಅಧಿಕೃತವಾಗಿ ಬಿಡ್ ಸಲ್ಲಿಸಲಾಗಿದೆ. ಸಂಜೀವ್ ಕುಮಾರ್ ಗುಪ್ತಾ ಒಡೆತನದ ಲೋಹ ತಯಾರಿಕೆಯ ಸಂಸ್ಥೆ ಲಿಬರ್ಟಿ ಹೌಸ್ ಟಾಟಾ ಸಂಸ್ಥೆಯ ಯುಕೆಯಲ್ಲಿರುವ ಉಕ್ಕು ಕಾರ್ಖಾನೆಯನ್ನು ಖರೀದಿಸಲು ಉತ್ಸಾಹ ತೋರಿದೆ.
ಈ ಹಿಂದೆ ಲಿಬರ್ಟಿ ಹೌಸ್ ಸಂಸ್ಥೆ ಬ್ರಿಟನ್ ನಲ್ಲಿರುವ ಟಾಟಾ ಸಂಸ್ಥೆಯ ಸ್ಕಾಟಿಶ್ ಪ್ಲೇಟ್  ಘಟಕವನ್ನು ಖರೀದಿಸಿತ್ತು. ಈಗ ಬ್ರಿಟನ್ ನಲ್ಲಿರುವ ಟಾಟಾ ಸ್ಟೀಲ್ ನ ಎಲ್ಲಾ ಸ್ವತ್ತುಗಳನ್ನು ಖರೀದಿಸಲು ಲಿಬರ್ಟಿ ಹೌಸ್ ಮುಂದಾಗಿದೆ. ಯುಕೆಯಲ್ಲಿರುವ ಟಾಟಾ ಸ್ಟೀಲ್ ಸಂಸ್ಥೆ 3 ಬಿಲಿಯನ್ ಡಾಲರ್ ನಷ್ಟ ಅನುಭವಿಸಿರುವುದರಿಂದ ಅಲ್ಲಿನ ಘಟಕವನ್ನು ಮಾರಾಟ ಮಾಡಲಾಗುತ್ತಿದೆ. ಯುಕೆಯಲ್ಲಿರುವ ಟಾಟಾ ಸ್ಟೀಲ್ ಸಂಸ್ಥೆ 3 ಬಿಲಿಯನ್ ಡಾಲರ್ ನಷ್ಟ ಅನುಭವಿಸಿರುವುದರಿಂದ ಅಲ್ಲಿನ ಘಟಕವನ್ನು ಮಾರಾಟ ಮಾಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಯುರೋಪಿಯನ್‌ ರಾಷ್ಟ್ರಗಳಲ್ಲಿ ಮಾರಾಟಕ್ಕಿರುವ ಟಾಟಾ ಉಕ್ಕಿನ ಕಂಪನಿಗಳನ್ನು ಖರೀದಿಸಲು ಅನಿವಾಸಿ ಭಾರತೀಯ ಸಂಜೀವ್‌ ಗುಪ್ತಾ ಒಡೆತನದ ಲಿಬರ್ಟಿ ಹೌಸ್‌ ಕಂಪನಿ ಬಿಡ್‌ ಸಲ್ಲಿಸಲು ನಿರ್ಧರಿಸಿದೆ.  

Related Stories

No stories found.

Advertisement

X
Kannada Prabha
www.kannadaprabha.com