ಮತ್ತೆ ಪೆಟ್ರೋಲ್ ದರ 2.58 ರು., ಡೀಸೆಲ್ 2.26 ರು. ಏರಿಕೆ

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 2.58ರು ಮತ್ತು ಡೀಸೆಲ್ ದರ 2.26ರು ಏರಿಕೆಯಾಗಿದೆ...
ಪೆಟ್ರೋಲ್ ದರ ಏರಿಕೆ (ಸಂಗ್ರಹ ಚಿತ್ರ)
ಪೆಟ್ರೋಲ್ ದರ ಏರಿಕೆ (ಸಂಗ್ರಹ ಚಿತ್ರ)

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 2.58ರು ಮತ್ತು ಡೀಸೆಲ್ ದರ 2.26ರು ಏರಿಕೆಯಾಗಿದೆ.

ಕೇವಲ ಒಂದು ತಿಂಗಳ ಅವಧಿಯಲ್ಲಿ ಸತತ ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಬೆಲೆ ಲೀಟರ್ ಗೆ 2.58 ರೂಪಾಯಿ, ಡೀಸೆಲ್ ಬೆಲೆ ಲೀಟರ್ ಗೆ 2.26 ರು. ಏರಿಕೆಯಾಗಿದೆ. ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿಗೆ ಬಂದಿದ್ದು, ದರ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ತೈಲ ದರವನ್ನಾಧರಿಸಿ ಭಾರತೀಯ ತೈಲೋತ್ಪನ್ನ ಸಂಸ್ಥೆಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸಿವೆ.

ಈ ಹಿಂದೆ ಭಾರತಕ್ಕೆ ಕಚ್ಛಾತೈಲ ರಫ್ತು ಮಾಡುತ್ತಿದ್ದ ಇರಾಕ್ ತೈಲ ಕಂಪನಿಗಳು ಶುಲ್ಕ ವಿನಾಯಿತಿ ತೆಗೆದುಹಾಕಿದ್ದು, ಇದರಿಂದಾಗಿ ದೇಶೀಯ ತೈಲೋತ್ಪನ್ನ ಸಂಸ್ಥೆಗಳೇ ಶುಲ್ಕ ಪಾವತಿ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದೆ. ಕಳೆದ ಮೇ 1 ರಂದು ಪೆಟ್ರೋಲ್ ಲೀಟರ್ ಗೆ 1.6 ರೂ., ಡೀಸೆಲ್ 2.94 ರು. ಏರಿಕೆಯಾಗಿತ್ತು. ಬಳಿಕ ಮೇ 17ರಂದು ಪೆಟ್ರೋಲ್ ಲೀಟರ್ ಗೆ 83 ಪೈಸೆ, ಡೀಸೆಲ್ ಲೀಟರ್ ಗೆ 1.26 ರೂ ಏರಿಕೆ ಮಾಡಲಾಗಿತ್ತು. ಇದೀಗ ಮೂರನೇ ಬಾರಿಗೆ ಪೆಟ್ರೋಲ್ 2.58 ರೂ. ಹಾಗೂ ಡೀಸೆಲ್ 2.26 ರೂ. ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com