ನವದೆಹಲಿ: ಕಪ್ಪು ಹಣ ಬಳಿ ಮಾಡಲು ಸಹಕರಿಸುತ್ತಿದ್ದ ಇಬ್ಬರು ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಗಳ ಮನೆ ಮೇಲೆ ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ವರದಿಯನ್ನಾಧರಿಸಿ ಆದಾಯ ತೆರಿಗೆ ಇಲಾಖೆ ದೆಹಲಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ನ ಕಾಶ್ಮೀರ ಗೇಟ್ ಶಾಖೆಯ ಮೇಲೆ ದಾಳಿ ನಡೆಸಿದೆ. ಅಲ್ಲದೆ ಇಬ್ಬರು ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಗಳ ಮನೆ ಮೇಲೆಯೂ ದಾಳಿ ನಡೆಸಿದೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.
ಇಬ್ಬರು ವ್ಯಕ್ತಿಗಳ ಬಳಿ 3.5 ಕೋಟಿ ರುಪಾಯಿ ಮೌಲ್ಯದ ಹೊಸ ನೋಟ್ ಗಳು ಪತ್ತೆಯಾದ ನಂತರ ಎಚ್ಚೆತ್ತುಕೊಂಡ ಆದಾಯ ತೆರಿಗೆ ಇಲಾಖೆ ಈ ದಾಳಿ ನಡೆಸಿದ ಎನ್ನಲಾಗಿದೆ.
ಆಕ್ಸಿಸ್ ಬ್ಯಾಂಕ್ ನ ಮ್ಯಾನೇಜರ್ ಗಳು ಚಿನ್ನವನ್ನು ಕಮಿಷನ್ ಆಗಿ ಪಡೆದು ಕಪ್ಪು ಹಣವನ್ನು ಬಳಿ ಮಾಡಲು ಸಹಕರಿಸುತ್ತಿದ್ದರು ಎನ್ನಲಾಗಿದೆ.