ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಏರಿಕೆ ಕಂಡುಬಂದ ಸೂಚ್ಯಂಕ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರದ ಷೇರು ವ್ಯವಹಾರದ ಮೌಲ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರದ ಷೇರು ವ್ಯವಹಾರದ ಮೌಲ್ಯ ಏರಿಕೆಯಾಗಿದೆ. ಲೋಹ ಪದಾರ್ಥಗಳ ತಯಾರಿಕೆ ಕಂಪೆನಿ, ಆಟೋಮೊಬೈಲ್, ತೈಲ, ಅನಿಲ ಮತ್ತು ಆರೋಗ್ಯ ಕ್ಷೇತ್ರಗಳ ಷೇರುಗಳ ಬೆಲೆ ಇಂದು ಏರಿಕೆಯಾಗಿದೆ.
ನಿಫ್ಟಿ ಇಂದು ಬೆಳಗಿನ ವಹಿವಾಟು ಆರಂಭಕ್ಕೆ 32.60 ಅಂಕ ಏರಿಕೆಯಾಗಿದ್ದು 8,159.50ರಲ್ಲಿ ವಹಿವಾಟು ನಡೆಸುತ್ತಿತ್ತು.ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ 26,408.62ರಲ್ಲಿ ವಹಿವಾಟು ಆರಂಭಿಸಿ 120.61 ಅಂಕ ಏರಿಕೆ ಕಂಡು 26,470.78ರಲ್ಲಿ ವಹಿವಾಟು ನಡೆಸಿತು.
ವಾರದ ಆರಂಭ ದಿನವಾದ ನಿನ್ನೆ ಬಿಎಸ್ ಇ ಸೆನ್ಸೆಕ್ಸ್ ಕುಸಿತ ಕಂಡುಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com