ಮುಂದಿನ ಐದು ದಿನಗಳು ಬ್ಯಾಂಕ್ ಗೆ ಸಾಲು ಸಾಲು ರಜೆ

ಅಕ್ಟೋಬರ್ 8 ರಿಂದ12 ರವರೆಗೆ ದೇಶದ ಎಲ್ಲಾ ಬ್ಯಾಂಕ್ ಗಳು ಮುಚ್ಚಲಿವೆ. ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಅಕ್ಟೋಬರ್ 8 ರಿಂದ12 ರವರೆಗೆ ದೇಶದ ಎಲ್ಲಾ ಬ್ಯಾಂಕ್ ಗಳು ಮುಚ್ಚಲಿವೆ. ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟು ಸ್ಥಗಿತಗೊಳ್ಳಲಿದೆ.

ಬ್ಯಾಂಕ್ ಗಳಿಗೆ ಸರಣಿ ರಜೆ ಇರುವುದರಿಂದ ಎಟಿಎಂ ಗ್ರಾಹಕರಿಗೂ ತೊಂದರೆ ಎದುರಾಗುವ ಸಾಧ್ಯತೆಯಿದೆ. ಒಂದು ಬಾರಿ ಎಟಿಎಂ ಗೆ ಹಣ ತುಂಬಿದರೇ ಸುಮಾರು ಎರಡು ದಿನ ಗ್ರಾಹಕರು ಡ್ರಾ ಮಾಡಬಹುದಾಗಿದೆ.

ಹೀಗಾಗಿ ಎಟಿಎ ಗ್ರಾಹಕರಿಗೆ ತೊಂದರೆ ಉಂಟಾಗದಂತೆ ಹಣ ತುಂಬಲು ಕ್ರಮ ಕೈಗೊಳ್ಳುವುದಾಗಿ ಬ್ಯಾಂಕ್ ಆಡಿತ ಮಂಡಳಿ ಭರವಸೆ ನೀಡಿವೆ.

ಅಕ್ಟೋಬರ್ 8 ಎರಡನೇ ಶನಿವಾರ, ಅ.9- ಭಾನುವಾರ ಸರ್ಕಾರಿ ರಜೆ, ಅ.10-ನವಮಿ, ಅ.11-ದಸರಾ, ಅ-12 ಮೊಹರಂ ಇರುವುದರಿಂದ ಬ್ಯಾಂಕ್ ಗಳಿಗೆ ಸರಣಿ ರಜೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com