ಸೆ.5 ಕ್ಕೆ ರಘುರಾಮ್ ರಾಜನ್ ಅವಧಿ ಮುಕ್ತಾಯ, ಅಧಿಕಾರ ವಹಿಸಿಕೊಳ್ಳಲಿರುವ ಉರ್ಜಿತ್ ಪಟೇಲ್

ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಅವರ ಅವಧಿ ಸೆ.5 ಕ್ಕೆ ಪೂರ್ಣಗೊಳ್ಳಲಿದ್ದು ಮುಕ್ತಾಯಗೊಳ್ಳಲಿದ್ದು, ನಿಯೋಜಿತ ಗೌರ್ನರ್ ಉರ್ಜಿತ್ ಪಟೇಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರಘುರಾಮ್ ರಾಜನ್-ಉರ್ಜಿತ್ ಪಟೇಲ್
ರಘುರಾಮ್ ರಾಜನ್-ಉರ್ಜಿತ್ ಪಟೇಲ್
Updated on: 

ಮುಂಬೈ: ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಅವರ ಅವಧಿ ಸೆ.5 ಕ್ಕೆ ಪೂರ್ಣಗೊಳ್ಳಲಿದ್ದು ಮುಕ್ತಾಯಗೊಳ್ಳಲಿದ್ದು, ನಿಯೋಜಿತ ಗೌರ್ನರ್ ಉರ್ಜಿತ್ ಪಟೇಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನಿರ್ಗಮಿತ ಗೌರ್ನರ್ ರಘುರಾಮ್ ರಾಜನ್ ಅವರಿಗೆ ಕೇಂದ್ರ ವಿತ್ತ ಸಚಿವಾಲಯ ಬೀಳ್ಕೊಡುಗೆ ಸಮಾರಂಭದ ಭಾಗವಾಗಿ ಔತಣ ಕೂಟ ಏರ್ಪಡಿಸಿತ್ತು. ಬೀಳ್ಕೊಡುಗೆ ಸಮಾರಂಭದ ನಂತರ ಮಾತನಾಡಿರುವ ರಘುರಾಮ್ ರಾಜನ್, ಹಣದುಬ್ಬರ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳನ್ನು ತಮ್ಮೊಂದಿಗೆ ಕೆಲಸ ಮಾಡಿದ್ದ ಉರ್ಜಿತ್ ಪಟೇಲ್ ಮುಂದುವರೆಸಿದ್ದಾರೆ ಎಂದು ರಘುರಾಮ್ ರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದರು.
 
ಕಳೆದ ಮೂರು ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ್ದ ಉರ್ಜಿತ್ ಪಟೇಲ್, ಹಣಕಾಸು ನೀತಿಯನ್ನು ಸಮರ್ಥವಾಗಿ ಮುಂದುವರೆಸಲಿದ್ದಾರೆ ಎಂದು ರಘುರಾಮ್ ರಾಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ದರ ಆರ್ ಬಿಐ ಗುರಿಯನ್ನು ಮೀರಿದೆಯಾದರೂ ಮುಂದಿನ ದಿನಗಳಲ್ಲಿ ಕಡಿಮೆ ಯಾಗಲಿದೆ ಎಂದು ರಘುರಾಮ್ ರಾಜನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com