20 ಸಾಧಕರಿಗೆ 'ಇನ್ಫಿ ಮೇಕರ್ಸ್' ಪ್ರಶಸ್ತಿ ಘೋಷಿಸಿದ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್

ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ಸಲುವಾಗಿ ಭಾರತದ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್ 'ಇನ್ಫಿ ಮೇಕರ್ಸ್' ಪ್ರೆಶಸ್ತಿಯನ್ನು ದೇಶದಾದ್ಯಂತ ಹಲವು ಪರಿವರ್ತಕರಿಗೆ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ಸಲುವಾಗಿ ಭಾರತದ ಸಾಫ್ಟ್ವೇರ್ ದೈತ್ಯ ಇನ್ಫೋಸಿಸ್ 'ಇನ್ಫಿ ಮೇಕರ್ಸ್' ಪ್ರೆಶಸ್ತಿಯನ್ನು ದೇಶದಾದ್ಯಂತ ಹಲವು ಪರಿವರ್ತಕರಿಗೆ ಘೋಷಿಸಿದೆ. 
2500 ನೊಂದಣಿ, 280 ಪ್ರವೇಶಗಳ ನಡುವೆ 20 ಜನರನ್ನು ವಿಜೇತರೆಂದು ಈ ಪ್ರಶಸ್ತಿಯ ಮೊದಲ ಆವೃತ್ತಿಯಲ್ಲಿ ಘೋಷಿಸಲಾಗಿದೆ. 
ಆರೋಗ್ಯ, ಇಂಧನ, ಶಿಕ್ಷಣ, ಶಬ್ದ ಮತ್ತು ಸಂಗೀತ, ಸಾಮಾಜಿಕ ಬದಲಾವಣೆ, ರೊಬೊಟಿಕ್ಸ್, ಕಲೆ ಮಾತು ವಿನ್ಯಾಸ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಎಲೆಕ್ಟಾನಿಕ್ಸ್ ಮುಂತಾದ ವಿಭಾಗಗಳಿಂದ ವಿಜೇತರನ್ನು ಆಯ್ಕೆ ಮಾಡಲಾಗಿದೆ. 
"ಮುಂದಿನ ಪೀಳಿಗೆಯ ಪರಿವರ್ತಕರನ್ನು ಗುರುತಿಸಿ ಉತ್ತೇಜಿಸಲು 'ಇನ್ಫಿ ಮೇಕರ್ಸ್' ಪ್ರಶಸ್ತಿ ಭಾರತದಲ್ಲಿ ನೀಡಲಾಗುತ್ತಿದೆ" ಎಂದು ಇನ್ಫೋಸಿಸ್ ಸಿ ಒ ಒ ಪ್ರವೀಣ್ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಈ 20 ವಿಜೇತರಿಗೆ ಐದು ಲಕ್ಷ ನಗದು ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಈ ಪ್ರಶಸ್ತಿಯನ್ನು 2015 ರಲ್ಲಿ ಅಮೆರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಅವರ 'ರಾಷ್ಟ ನಿರ್ಮಾರ್ತೃಗಳು' ಅಭಿಯಾನದೊಂದಿಗೆ ಇನ್ಫೋಸಿಸ್ ಫೌಂಡೇಶನ್ ಅಮೆರಿಕಾ ಚಾಲನೆ ನೀಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com