ಭಾರತೀಯ ಮೂಲದ ಪ್ರಾಧ್ಯಾಪಕರ ಆರೋಗ್ಯ ಮೇಲ್ವಿಚಾರಣೆ ಸ್ಟಾರ್ಟ್ ಅಪ್ ಖರೀದಿಸಿದ ಗೂಗಲ್

ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ವೇತಾಕ್ ಪಟೇಲ್ ಸ್ಥಾಪಿಸಿದ ಸಿಯಾಟಲ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಸಾನ್ ಫ್ರಾನ್ಸಿಸ್ಕೊ: ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ವೇತಾಕ್ ಪಟೇಲ್ ಸ್ಥಾಪಿಸಿದ ಸಿಯಾಟಲ್ ಮೂಲದ ಆರೋಗ್ಯ ಮೇಲ್ವಿಚಾರಣಾ ಸ್ಟಾರ್ಟ್ ಅಪ್ ಸಂಸ್ಥೆ ಸೆನೊಸಿಸ್ ಹೆಲ್ತ್ ನ್ನು ಗೂಗಲ್ ಖರೀದಿಸಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಈ ಸ್ಟಾರ್ಟ್ ಅಪ್ ಸಂಸ್ಥೆ ಸ್ಮಾರ್ಟ್ ಫೋನ್ ಗಳನ್ನು ವೈದ್ಯಕೀಯ ಸಾಧನವಾಗಿ ಬದಲಾಯಿಸಿಕೊಂಡು ಅನೇಕ ಆರೋಗ್ಯ ಸಂಬಂಧಿ ಅಂಕಿಅಂಶಗಳನ್ನು ಪಡೆದುಕೊಳ್ಳುತ್ತದೆ ಎಂದು ವರ್ಜ್ ವರದಿ ಮಾಡಿದೆ.
ಸ್ಮಾರ್ಟ್ ಫೋನ್ ನಲ್ಲಿ ಕಾರ್ಯನಿರ್ವಹಣೆಯನ್ನು ಬಳಸಿಕೊಂಡು ಸೆನೊಸಿಸ್ ಆಪ್ಸ್ ಶ್ವಾಸಕೋಶದ ಆರೋಗ್ಯ, ಹಿಮೊಗ್ಲೋಬಿನ್ ಮಟ್ಟ ಮೊದಲಾದವುಗಳನ್ನು ನಿಗಾವಹಿಸುತ್ತದೆ. ಉದಾಹರಣೆಗೆ ಹಿಮೊಗ್ಲೋಬಿನ್ ಮಟ್ಟವನ್ನು ಅಳೆಯಲು ಸೆನೊಸಿಸ್ ಅಪ್ಲಿಕೇಶನ್ ಫೋನ್ ನ ಫ್ಲಾಶ್ ನ್ನು ಬಳಸುತ್ತದೆ.
ನಾಲ್ವರು ಸ್ನೇಹಿತರೊಂದಿಗೆ ಸೇರಿ ಕಂಪೆನಿ ಆರಂಭಿಸಿರುವ ಪಟೇಲ್ ವಾಷಿಂಗ್ಟನ್ ನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. ಪಟೇಲ್ ಅವರ ಈ ಹಿಂದಿನ ಸ್ಟಾರ್ಟ್ ಅಪ್ ಸಂಸ್ಥೆಯನ್ನು ಬಲ್ಕಿನ್ ಇಂಟರ್ ನ್ಯಾಷನಲ್  ಅಂಡ್ ಸೀರ್ಸ್ ಖರೀದಿಸಿತ್ತು.
ವಾಷಿಂಗ್ಟನ್ ವೆಬ್ ಸೈಟ್ ನ ಬಯೋಗ್ರಫಿ ವಿಶ್ವವಿದ್ಯಾಲಯದ ಪ್ರಕಾರ, ಶ್ವೇತಾಕ್ ಪಟೇಲ್ ಝೆನ್ಸಿ ಇಂಕ್ ನ ಸ್ಥಾಪಕರಾಗಿದ್ದಾರೆ. ಇಂಧನ ಮೇಲ್ವಿಚಾರಣೆ ಪರಿಹಾರಗಳನ್ನು ಒದಗಿಸುವವ ಕಂಪೆನಿಯಾದ ಝೆನ್ಸಿಯನ್ನು ಬಲ್ಕಿನ್ ಕಂಪೆನಿ 2010ರಲ್ಲಿ ಖರೀದಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com