ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 31 ರಂದು ಲೋಕಸಭೆಯಲ್ಲಿ ಹೇಳಿರುವಂತೆ, ಸಬ್ಸಿಡಿ ಸಹಿತವಾದ ಅಡುಗೆ ಅನಿಲಕ್ಕೆ (ಎಲ್ಪಿಜಿ) ಪ್ರತಿ ತಿಂಗಳು 4 ರೂ. ಹೆಚ್ಚಿಸುವ ಮೂಲಕ ಮುಂದಿನ ವರ್ಷ ಮಾರ್ಚ್ ವೇಳೆಗೆ ಎಲ್ಪಿಜಿ ಸಬ್ಸಿಡಿ ಯನ್ನು ಸಂಪೂರ್ನವಾಗಿ ತೊಡೆದುಹಾಕಲು ಸರ್ಕಾರವು ದೇಶದ ತೈಲ ಸಂಸ್ಥೆಗಳಿಗೆ ಆದೇಶಿಸಿದೆ.