ಎಸ್ ಬಿಐ ಬೆನ್ನಲ್ಲೇ ಬಡ್ಡಿದರ ಕಡಿತಗೊಳಿಸಿದ ಪಿಎನ್ ಬಿ, ಯುಬಿಐ ಬ್ಯಾಂಕ್!

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಘೋಷಣೆಗಳನ್ನು ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಬ್ಯಾಂಕ್ ಗಳು ಕೂಡ ತಮ್ಮ ತಮ್ಮ ಬಡ್ಡಿದರವನ್ನು ಇಳಿಕೆ ಮಾಡಲು ಮುಂದಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಘೋಷಣೆಗಳನ್ನು ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಬ್ಯಾಂಕ್ ಗಳು ಕೂಡ ತಮ್ಮ ತಮ್ಮ ಬಡ್ಡಿದರವನ್ನು ಇಳಿಕೆ ಮಾಡಲು ಮುಂದಾಗಿವೆ.

ನಿನ್ನೆಯಷ್ಟೇ ಖ್ಯಾತ ಬ್ಯಾಕಿಂಗ್ ಸಂಸ್ಥೆ ಎಸ್ ಬಿಐ ತನ್ನ ಬಡ್ಡಿದರವನ್ನು ಕಡಿತಗೊಳಿಸಿತ್ತು. ಇದೀಗ ಇತರೆ ಬ್ಯಾಂಕ್ ಗಳು ಕೂಡ ಇದನ್ನೇ ಅನುಕರಿಸುತ್ತಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಯುಬಿಐ ಬ್ಯಾಂಕ್ ಗಳು ಕೂಡ  ಸಾಲದ ಮೇಲಿನ ಬಡ್ಡಿದರದಲ್ಲ ಶೇ0.90ರಷ್ಟು ಕಡಿತಗೊಳಿಸಿವೆ.

ಇತ್ತೀಚೆಗಷ್ಟೇ ಆರ್ ಬಿಐ ತನ್ನ ವಿತ್ತೀಯ ನೀತಿ ಘೋಷಣೆ ವೇಳೆ ಬಡ್ಡಿದರ ಇಳಿಕೆಯಾಗುವ ಮುನ್ಸೂಚನೆ ನೀಡಿತ್ತು. ಇದೀಗ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬ್ಯಾಂಕ್ ಗಳು ತಮ್ಮ ತಮ್ಮ ಬಡ್ಡಿದರವನ್ನು ಕಡಿತಗೊಳಿಸುತ್ತಿವೆ.  ಇನ್ನು ಇತರೆ ಪ್ರಮುಖ ಬ್ಯಾಂಕುಗಳು ಕೂಡ ಮಾರುಕಟ್ಟೆ ಪೈಪೋಟಿ ತಡೆಯಲು ಬಡ್ಡಿದರವನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com