ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಐಡಿಯಾ ಸೆಲ್ಯುಲಾರ್ ಜೊತೆಗೆ ವಿಲೀನ ಮಾತುಕತೆಯಲ್ಲಿ ವೊಡಾಫೋನ್

ಟೆಲಿಕಾಂ ಸಂಸ್ಥೆ ಐಡಿಯಾ ಸೆಲ್ಯುಲಾರ್ ಜೊತೆಗೆ ಭಾರತೀಯ ಚಟುವಟಿಕೆಗಳನ್ನು ವಿಲೀನಗೊಳ್ಳುವುದಕ್ಕೆ ಮಾತುಕತೆ ನಡೆಸಿರುವುದಾಗಿ ವೊಡಾಫೋನ್ ಸಂಸ್ಥೆ ತಿಳಿಸಿದೆ. ಮಾರುಕಟ್ಟೆಯಲ್ಲಿರುವ ತೀವ್ರ ಸ್ಪರ್ಧೆಯನ್ನು
ಲಂಡನ್: ಟೆಲಿಕಾಂ ಸಂಸ್ಥೆ ಐಡಿಯಾ ಸೆಲ್ಯುಲಾರ್ ಜೊತೆಗೆ ಭಾರತೀಯ ಚಟುವಟಿಕೆಗಳನ್ನು ವಿಲೀನಗೊಳ್ಳುವುದಕ್ಕೆ ಮಾತುಕತೆ ನಡೆಸಿರುವುದಾಗಿ ವೊಡಾಫೋನ್ ಸಂಸ್ಥೆ ತಿಳಿಸಿದೆ. ಮಾರುಕಟ್ಟೆಯಲ್ಲಿರುವ ತೀವ್ರ ಸ್ಪರ್ಧೆಯನ್ನು ಎದುರಿಸಲು ಎಲ್ಲ ಷೇರುಗಳ ಈ ವಿಲೀನ ಪ್ರಕ್ರಿಯೆ ಸಹಕರಿಸಲಿದೆ ಎನ್ನಲಾಗಿದೆ. 
ವೊಡಾಫೋನ್ ನೀಡಿರುವ ಸಣ್ಣ ಹೇಳಿಕೆಯಲ್ಲಿ, ಐಡಿಯಾದ ಮಾತೃ ಸಂಸ್ಥೆ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದೆ. ಈ ವಿಲೀನದೊಂದಿಗೆ ಐಡಿಯಾ, ವೊಡಾಫೋನ್ ಗೆ ಹೊಸ ಷೇರುಗಳನ್ನು ವಿತರಿಸಲಿದ್ದು, ವೊಡಾಫೋನ್ ಇಂಡಿಯಾ ತನ್ನ ಚಟುವಟಿಕೆಗಳ್ನನು ವಿಲೀನಗೊಳಿಸಲಿದೆ ಎನ್ನಲಾಗಿದೆ. 
ದಿನದ ಪ್ರಾರಂಭದಲ್ಲಿ ವೊಡಾಫೋನ್ ಷೇರು ಮೌಲ್ಯ ೩.೫% ಏರಿಕೆ ಕಂಡಿತ್ತು. 

Related Stories

No stories found.

Advertisement

X
Kannada Prabha
www.kannadaprabha.com