ಟೆಲಿಕಾಂ ಸೇವೆ ಆಯ್ತು, ಇದೀಗ ಫೋನ್ ನಿರ್ಮಾಣದಲ್ಲೂ ಬಿರುಗಾಳಿ ಎಬ್ಬಿಸಲಿರುವ ರಿಲಯನ್ಸ್ ಜಿಯೋ

ಉಚಿತ ಇಂಟರ್ ನೆಟ್ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ರಿಲಯನ್ಸ್ ಜಿಯೋ ಮಾಲೀಕ ಮುಖೇಶ್ ಅಂಬಾನಿ ಇದೀಗ...
ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ
ನವದೆಹಲಿ: ಉಚಿತ ಇಂಟರ್ ನೆಟ್ ನೀಡುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ ರಿಲಯನ್ಸ್ ಜಿಯೋ ಮಾಲೀಕ ಮುಖೇಶ್ ಅಂಬಾನಿ ಇದೀಗ ಬಹುನಿರೀಕ್ಷಿತ ಫೀಚರ್ ಫೋನ್(4G VoLET) ಇದೇ ತಿಂಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. 
ಈ ಫೋನ್ ನ ಬೆಲೆ ಕೇವಲ 500 ರುಪಾಯಿಯಾಗಲಿದ್ದು ಫೋನ್ ನಿರ್ಮಾಣ ಕಂಪೆನಿಗಳಿಗೆ ದೊಡ್ಡ ಮಟ್ಟದಲ್ಲಿ ಆಘಾತ ನೀಡಲಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಇದರ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಸಭೆ ಜುಲೈ 21ಕ್ಕೆ ನಿಗದಿಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಿದೆ. 
ಜಿಯೋದ ತನ್ನ ಈ ನೂತನ 4G ಫೋನ್ ಬೆಲೆ ಬಹಳ ಕಡಿಮೆ ಇಡಲಿದೆ ಎನ್ನಲಾಗಿದೆ. ಇನ್ನು 2G ಗ್ರಾಹಕರನ್ನು 4Gಗೆ ಸೆಳೆಯಲು ಹೀಗೆ ಮಾಡುತ್ತಿದ್ದಾರಂತೆ. ಇನ್ನು ಮಾರುಕಟ್ಟೆಯಲ್ಲಿ 4ಜಿ ಫೋನ್ ಗಳ ಬೆಲೆ ದುಬಾರಿಯಾಗಿರುವುದರಿಂದ ಜನರು 4ಜಿ ಬಳೆಕ ಮಾಡಬೇಕೆಂದು ಜಿಯೋ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com