ಹೆಚ್ಚು ಸುರಕ್ಷತೆಯೊಂದಿಗೆ ಶೀಘ್ರ ಬರಲಿದೆ ರೂ. 10 ಮುಖಬೆಲೆಯ ಹೊಸ ನೋಟು

ಶೀಘ್ರದಲ್ಲೇ ಹೆಚ್ಚು ಸುರಕ್ಷತಾ ಲಕ್ಷಣಗಳನ್ನು ಒಳಗೊಂಡ ಹೊಸ 10 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಗುರುವಾರ ಆರ್​ಬಿಐ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮುಂಬೈ: ಶೀಘ್ರದಲ್ಲೇ ಹೆಚ್ಚು ಸುರಕ್ಷತಾ ಲಕ್ಷಣಗಳನ್ನು ಒಳಗೊಂಡ ಹೊಸ 10 ರುಪಾಯಿ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಗುರುವಾರ ಆರ್​ಬಿಐ ಹೇಳಿದೆ.
ಹೊಸ 10 ರುಪಾಯಿ ನೋಟುಗಳಲ್ಲಿ ಸಂಖ್ಯೆಗಳ ಜತೆ ’L’ ಅಕ್ಷರ ಇರಲಿದೆ. ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿ ಹಾಗೂ ಮುದ್ರಣ ವರ್ಷ 2017 ಎಂದಿರಲಿದೆ. ನೋಟಿನ ಎರಡೂ ಬದಿಯಲ್ಲಿರುವ ಸಂಖ್ಯೆಗಳ ಗಾತ್ರ ಬದಲಿಸಲಾಗುವುದು. ಸಂಖ್ಯೆಗಳು ಎಡ ಭಾಗದಲ್ಲಿ ಸಣ್ಣದಿದ್ದರೆ ಬಲಭಾಗಕ್ಕೆ ದೊಡ್ಡದಿರಲಿದೆ. ಎಡಭಾಗದ ಮೊದಲ ಮೂರು ಸಂಖ್ಯೆಗಳು ಮಾತ್ರ ಸಮಾನ ಗಾತ್ರ ಹೊಂದಿರಲಿವೆ ಎಂದು ಆರ್ ಬಿಐ ತಿಳಿಸಿದೆ.
ಈಗ ಚಲಾವಣೆಯಲ್ಲಿರುವ ಹಳೆ 10 ರುಪಾಯಿ ನೋಟುಗಳು ರದ್ದಾಗುವುದಿಲ್ಲ, ಅವುಗಳು ಸಹ ಚಲಾವಣೆಯಲ್ಲಿರಲಿವೆ. ಅವುಗಳ ಜತೆಯಲ್ಲಿ ಹೊಸ ನೋಟುಗಳೂ ಸಹ ಚಲಾವಣೆಗೆ ಬಿಡುಗಡೆ ಮಾಡಲಾಗುವುದು ಎಂದು ಆರ್​ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com