ತ್ರಿವರ್ಣ ಬಣ್ಣದ ಮ್ಯಾಟ್ ಮಾರಾಟ ಪ್ರಕರಣ: ಅಮೇಜಾನ್ ವಿರುದ್ಧ ಪ್ರಧಾನಿ ಮೋದಿ ಕೆಂಗಣ್ಣು!

ಅಮೇಜಾನ್ ಸಂಸ್ಥೆಯ ಎಡವಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಪ್ರಕರಣ ಮರುಕಳಿಸದಂತೆ ಸಂಸ್ಥೆಗೆ ಎಚ್ಚರಿಕೆ ನೀಡುವಂತೆ ಅಮೆರಿಕ ಮತ್ತು ಕೆನಡಾ ರಾಯಭಾರಿಗಳಿಗೆ ಸೂಚನೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ತ್ರಿವರ್ಣ ಧ್ವಜದ ಡೋರ್ ಮ್ಯಾಟ್ ಗಳನ್ನು ತನ್ನ ವೆಬ್ ಸೈಟ್ ನಲ್ಲಿ ಮಾರಾಟಕ್ಕೆ ಹಾಕುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದ ಅಮೇಜಾನ್ ಸಂಸ್ಥೆಯ ಎಡವಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಗಂಭೀರವಾಗಿ  ಪರಿಗಣಿಸಿದ್ದು, ಇಂತಹ ಪ್ರಕರಣ ಮರುಕಳಿಸದಂತೆ ಸಂಸ್ಥೆಗೆ ಎಚ್ಚರಿಕೆ ನೀಡುವಂತೆ ಅಮೆರಿಕ ಮತ್ತು ಕೆನಡಾ ರಾಯಭಾರಿಗಳಿಗೆ ಸೂಚನೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ತ್ರಿವರ್ಣ ಧ್ವಜದ ಡೋರ್ ಮ್ಯಾಟ್ ಗಳು ಅಮೇಜಾನ್ ವೆಬ್ ಸೈಟ್ ಗಳಲ್ಲಿ ಪ್ರದರ್ಶನವಾಗುತ್ತಿದ್ದಂತೆಯೇ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಸಂಸ್ಥೆಗೆ ಕಠಿಣ ಸಂದೇಶ ರವಾನಿಸಿ ವಿವಾದಿತ ಡೋರ್ ಮ್ಯಾಟ್  ಗಳನ್ನು ವೆಬ್ ಸೈಟಿನಿಂದ ತೆಗೆಸಿಹಾಕಿಸಿದ್ದರು. ಸ್ವತಃ ಅಮೇಜಾನ್ ಸಂಸ್ಥೆಯ ಸಿಇಒ ಜೆಫ್ ಬೆಜೋಸ್ ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಮುಂದೆ ಇಂತಹ ಪ್ರಮಾದ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಹೇಳಿದ್ದರು. ಆದರೆ  ಬಳಿಕದ ದಿನಗಳಲ್ಲಿ ಇಂತಹ ಹಲವು ಪ್ರಕರಣಗಳು ಪುನರಾವರ್ತನೆಯಾಗಿತ್ತು. ಇದೀಗ ಇದೇ ಕಾರಣಕ್ಕೆ ಅಮೇಜಾನ್ ಸಂಸ್ಥೆ ವಿರುದ್ಧ ಪ್ರಧಾನಿ ಮೋದಿ ಕೆಂಗಣ್ಣು ಬೀರಿದ್ದು, ಅಮೆಜಾನ್ ಸಂಸ್ಥೆಯ ವಿರುದ್ಧ ಕಠಿಣಕ್ರಮಕ್ಕೆ  ಮುಂದಾಗಿದ್ದಾರೆ.

ಮೂಲಗಳ ಪ್ರಕಾರ ಪ್ರಧಾನಿ ಮೋದಿ ಕಚೇರಿಯಿಂದ ಅಮೆರಿಕ ಮತ್ತು ಕೆನಡಾ ರಾಯಭಾರಿಗಳಿಗೆ ಸಂದೇಶ ರವಾನಿಸಲಾಗಿದ್ದು, ಸಂದೇಶದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅಗೌರವದಿಂದ ಕಂಡ ಅಮೇಜಾನ್ ಸಂಸ್ಥೆಗೆ ಕಠಿಣ  ಎಚ್ಚರಿಕೆ ನೀಡುವಂತೆ ರಾಯಭಾರಿಗಳಿದೆ ಖಡಕ್ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಮೇಜಾನ್ ಸಂಸ್ಥೆಯ ಉನ್ನತಾಧಿಕಾರಿಗಳ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ರಾಯಭಾರಿಗಳಿಗೆ ಸೂಚನೆ  ನೀಡಲಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳುವಂತೆಯೂ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಧಾನಿ ಕಚೇರಿಯ ಈ ಕ್ರಮ ಭಾರತದಲ್ಲಿ ಸುಮಾರು 5 ಬಿಲಿಯನ್ ಗೂ ಅಧಿಕ ಬಂಡವಾಳ ಹೂಡಬೇಕು ಎಂದುಕೊಂಡಿರುವ ಅಮೇಜಾನ್ ಸಂಸ್ಥೆಗೆ ಭಾರಿ ಹಿನ್ನಡೆಯಾಗಿದ್ದು, ಭಾರತ ಸರ್ಕಾರದ ಓಲೈಕೆಗಾಗಿ ಅಮೇಜಾನ್ ಸಂಸ್ಥೆ  ಹವಣಿಸುತ್ತಿದೆ ಎಂದು ತಿಳಿದುಬಂದಿದೆ.

ಭಾರತೀಯ ಮೂಲದ ಆನ್ ಲೈನ್ ಮಾರುಕಟ್ಟೆ ಸಂಸ್ಥೆಗಳಾದ ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ನಂತಹ ಪ್ರಮುಖ ಸಂಸ್ಥೆಗಳನ್ನು ಹಿಂದಿಕ್ಕಿ ಭಾರತದಲ್ಲಿ ಮಾರುಕಟ್ಟೆ ಅಧಿಪತ್ಯ ಸಾಧಿಸಬೇಕು ಎನ್ನುವ ಅಮೇಜಾನ್ ಸಂಸ್ಥೆಯ  ಪ್ರಯತ್ನಕ್ಕೆ ಇದೀಗ ಆರಂಭಿಕ ಹಿನ್ನಡೆಯಾದಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com