ಬಿಎಸ್‌ಎನ್‌ಎಲ್‌ನಿಂದ 2019ಕ್ಕೆ ದೇಶದ ಪ್ರತಿಯೊಬ್ಬರಿಗೂ ಸ್ಯಾಟಲೈಟ್ ಫೋನ್ ಸೇವೆ!

ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್‌) ಇನ್ನೆರಡು ವರ್ಷಗಳಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸ್ಯಾಟಲೈಟ್(ಉಪಗ್ರಹ) ಫೋನ್...
ಬಿಎಸ್‌ಎನ್‌ಎಲ್‌
ಬಿಎಸ್‌ಎನ್‌ಎಲ್‌
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್‌) ಇನ್ನೆರಡು ವರ್ಷಗಳಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸ್ಯಾಟಲೈಟ್(ಉಪಗ್ರಹ) ಫೋನ್ ಸೇವೆ ನೀಡಲು ಉದ್ದೇಶಿಸಿದೆ. 
ನೈಸರ್ಗಿಕ ವಿಕೋಪದಿಂದಾಗಿ ಮೊಬೈಲ್ ಸೇವೆಗಳು ವ್ಯತ್ಯಯಗೊಂಡರೂ ದೇಶದ ಯಾವುದೇ ಮೂಲೆಯಲ್ಲಿಯೂ ಸ್ಯಾಟಲೈಟ್ ಫೋನ್ ಕಾರ್ಯನಿರ್ವಹಿಸಬಲ್ಲದು. ಎಲ್ಲರಿಗೂ ಸ್ಯಾಟಲೈಟ್ ಫೋನ್ ಸೇವೆ ನೀಡುವ ಸಲುವಾಗಿ ನಾವು ಇಂಟರ್ ನ್ಯಾಷನಲ್ ಮೇರಿಟೈಮ್ ಆರ್ಗನೈಸೇಷನ್ ಗೆ ಕೋರಿಕೆ ಸಲ್ಲಿಸಿದ್ದೇವೆ ಎಂದು ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ. 
ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ಸಮಯ ತಗುಲಲಿದ್ದು 18-24 ತಿಂಗಳಿನಲ್ಲಿ ಎಲ್ಲಾ ನಾಗರಿಕರಿಗೂ ಹಂತ ಹಂತವಾಗಿ ಸ್ಯಾಟಲೈಟ್ ಫೋನ್ ಸೇವೆ ಆರಂಭಿಸಲು ಸಾಧ್ಯವಾಗಲಿದೆ. ಸ್ಯಾಟಲೈಟ್ ಫೋನ್ ಗಳು ಭೂಮಿಯಿಂದ 35,700 ಅಡಿ ಎತ್ತರದಲ್ಲಿರುವ ಉಪಗ್ರಹಗಳಿಂದ ನೇರವಾಗಿ ಸಂಕೇತಗಳನ್ನು ಪಡೆಯುವುದರಿಂದ ವಿಮಾನ, ಹಡಗುಗಳ ಒಳಗೂ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ. 
ಇನ್ನು ಸಾಂಪ್ರದಾಯಿಕ ಮೊಬೈಲ್ ಫೋನ್ ಗಳು ಟವರ್ ಗಳಿಂದ 25-30 ಕಿ.ಮೀ ಸುತ್ತಮುತ್ತ ಮಾತ್ರ ಕಾರ್ಯನಿರ್ವಹಿಸುತ್ತದೆ. ಮೊದಲ ಹಂತದಲ್ಲಿ ವಿಪತ್ತು ನಿರ್ವಹಣಾ ಸಂಸ್ಥೆಗಳು, ರಾಜ್ಯ ಪೊಲೀಸ್, ರೈಲ್ವೆ, ಗಡಿ ಭದ್ರತಾ ಪಡೆ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಸ್ಯಾಟಲೈಟ್ ಫೋನ್ ಗಳು ನೀಡಲಾಗುತ್ತದೆ. ಸೇವೆ ವಿಸ್ತರಿಸಿ ದೇಶದ ಪ್ರತಿಯೊಬ್ಬರು ಸ್ಯಾಟಲೈಟ್ ಫೋನ್ ಬಳಸಲು ಆರಂಭಿಸುವಂತೆ ಮಾಡಲಾಗುವುದು ಎಂದರು. ಸದ್ಯ ಇದರ ದರ 40 ಸಾವಿರ ವಿದ್ದು ಮುಂದೆ ಕಡಿಮೆಯಾಗುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com