ನವದೆಹಲಿ: ಭಾರತದ ಮೊದಲ 100 ಬಿಲಿಯನ್ ಡಾಲರ್ ಸಂಸ್ಥೆ ಎನ್ನುವ ಕೀರ್ತಿಗೆ ದೇಶದ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಪಾತ್ರವಾಗಿದೆ.
ಸೋಮವಾರ ಬೆಳಿಗ್ಗೆ 9.49ಕ್ಕೆ ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 6,62,726.36 ಕೋಟಿ ರೂ. ಗೆ ತಲುಪುವ ಮುಖೇನ ಟಿಸಿಎಸ್ ಈ ದಾಖಲೆ ಮಾಡಿದೆ.
ಟಾಟಾ ಸಮೂಹದ ಮುಖ್ಯಸ್ಥರಾದ ಎನ್ ಚಂದ್ರಶೇಖರನ್ ಮಾತನಾಡಿ "ಸಂಸ್ಥೆಯ ಪಾಲಿಗಿದು ವಿಶೇಷ ಕ್ಷಣವಾಗಿದೆ. ಇದಕ್ಕಾಗಿ ನಾವು ಸಾಕಷ್ಟು ಸಮಯದಿಂದ ಎದುರು ನೋಡುತ್ತಿದ್ದೆವು. ಮುಂಬರುವ ತಿಂಗಳಿನಲ್ಲಿ ನಾವು ಉತ್ತಮ ತ್ರೈಮಾಸಿಕ ಬೆಳವಣಿಗೆ ದಾಖಲಿಸುವ ವಿಶ್ವಾಸವಿದೆ" ಎಂದರು.
ಐವತ್ತು ವರ್ಷಗಳ ಇತಿಹಾಸವಿರುವ ಟಿಸಿಎಸ್ ಇತ್ತೀಚೆಗೆ ಕಳೆದ ವರ್ಷ ಜನವರಿ-ಮಾರ್ಚ್ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು ಆ ವರದಿಯಲ್ಲಿನ ಅಂಶಗಳು ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದ್ದವು. ಇದೇ ಕಾರಣದಿಂದ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಒಮ್ಮೆಲೇ ಏರಿಕೆ ಕಂಡಿದೆ.
ರಾಷ್ಟ್ರದ ಪ್ರಥಮ 100 ಬಿಲಿಯನ್ ಡಾಲರ್ ಆಗಿ ಹೊರಹೊಮ್ಮಿದ ಈ ಸಂಸ್ಥೆಯ ಸಾಧನೆ ಗಮನಾರ್ಹವಾದದ್ದು ಟಿಸಿಎಸ್ ನ ಈ ದಾಖಲೆ ಸರಿಗಟ್ಟುವುದು ಸಧ್ಯದ ಮಟ್ಟಿಗೆ ಭಾರತದ ಇತರೆ ಸಂಸ್ಥೆಗಳಿಗೆ ಕ್ಠಿಣವಾಗಿದೆ. ಟಿಸಿಎಸ್ ನ ಪ್ರಮುಖ ಎದುರಾಳಿ ಇನ್ಫೋಸಿಸ್ ಸಂಸ್ಥೆಯ ಒಟ್ಟು ಮೌಲ್ಯ38 ಬಿಲಿಯನ್ ಡಾಲರ್ ಅಷ್ಟಿದೆ.