ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ 70.37 ರೂ (24 ಪೈಸೆ ಇಳಿಕೆ), ಮತ್ತು ಡೀಸೆಲ್ ದರ 64.87 ರೂ (27 ಪೈಸೆ ಇಳಿಕೆ) ಇದೆ. ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂದಿನ ಪೆಟ್ರೋಲ್ ದರ 75.95 ರೂ (23 ಪೈಸೆ ಇಳಿಕೆ), ಡೀಸೆಲ್ ಬೆಲೆ 67.86 ರೂ (29 ಪೈಸೆ ಇಳಿಕೆ) ಆಗಿದೆ. ಕೋಲ್ಕತದಲ್ಲಿ ಇಂದಿನ ಪೆಟ್ರೋಲ್ ಬೆಲೆ 72.42 ರೂ (23 ಪೈಸೆ ಇಳಿಕೆ) ಮತ್ತು ಡೀಸೆಲ್ ಬೆಲೆ 66.59 ರೂ (27 ಪೈಸೆ ಇಳಿಕೆ) ಗಳಾಗಿವೆ.