ಇಳಿಕೆಯಾಯ್ತು, ಇನ್ನು ತೈಲೋತ್ಪನ್ನಗಳ ದರ ಏರಿಕೆಗೆ ಸಿದ್ಧರಾಗಿ!

ಕಳೆದ ಹಲವು ದಿನಗಳಿಂದ ಇಳಿಕೆಯಾಗುತ್ತಿದ್ದ ತೈಲೋತ್ಪನ್ನಗಳ ದರಗಳ ಸುದ್ದಿ ಕೇಳಿ ನೀವು ಖುಷಿಯಾಗಿರಬಹುದು, ಆದರೆ ಶೀಘ್ರ ನಿಮ್ಮ ಖುಷಿಗೆ ಬ್ರೇಕ್ ಬೀಳಲಿದ್ದು, ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಕಳೆದ ಹಲವು ದಿನಗಳಿಂದ ಇಳಿಕೆಯಾಗುತ್ತಿದ್ದ ತೈಲೋತ್ಪನ್ನಗಳ ದರಗಳ ಸುದ್ದಿ ಕೇಳಿ ನೀವು ಖುಷಿಯಾಗಿರಬಹುದು, ಆದರೆ ಶೀಘ್ರ ನಿಮ್ಮ ಖುಷಿಗೆ ಬ್ರೇಕ್ ಬೀಳಲಿದ್ದು, ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.
ಹೌದು.. ಇನ್ನು ಕೆಲವೇ ದಿನಗಳಲ್ಲಿ ತೈಲೋತ್ಪನ್ನಗಳ ದರಗಳು ಮತ್ತೆ ಗಗನದತ್ತ ಮುಖ ಮಾಡಲಿವೆ. ಇದಕ್ಕೆ ಪ್ರಮುಖ ಕಾರಣ ಒಪೆಕ್ (ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟ) ಕೈಗೊಂಡ ಕಠಿಣ ನಿರ್ಧಾರ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದಿನೇ ದಿನೇ ಕಚ್ಛಾ ತೈಲ ದರ ಕುಸಿಯುತ್ತಿರುವುದು ತೈಲೋತ್ಪನ್ನ ರಾಷ್ಟ್ರಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದೇ ಕಾರಣಕ್ಕೆ ಒಪೆಕ್ ಕಚ್ಛಾ ತೈಲ ಉತ್ಪಾದನೆ ಮೇಲೆ ನಿಯಂತ್ರಣ ಹೇರುತ್ತಿದ್ದು, ನಿತ್ಯ 1.2 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾತ್ರ ಉತ್ಪಾದನೆ ಮಾಡಲು ನಿರ್ಧರಿಸಿದೆ ಮತ್ತು ಒಕ್ಕೂಟದ ಈ ನಿರ್ಧಾರದಿಂದಾಗಿ ಪ್ರತೀ ಬ್ಯಾರೆಲ್ ಕಚ್ಛಾ ತೈಲ ದರ 70 ಡಾಲರ್ ಗೆೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಪೆಕ್ ನ ಈ ನಿರ್ಧಾರದಿಂದಾಗಿ ಭಾರತದಲ್ಲಿ ತೈಲ ದರ ಏರಿಕೆಯಾಗುವ ಆತಂಕ ಎದುರಾಗಿದ್ದು, ಅಲ್ಲದೆ ದರಗಳ ನಿತ್ಯ ಪರಿಷ್ಕರಣೆಯಿಂದಾಗಿಯೂ ಭಾರತದಲ್ಲಿ ತೈಲ ಕಂಪನಿಗಳು ಸಂಕಷ್ಟ ಎದುರಿಸುವಂತಾಗಿತ್ತು. ಇನ್ನು ಭಾರತೀಯ ತೈಲ ಕಂಪೆನಿಗಳು 2018-19 ವಿತ್ತೀಯ ವರ್ಷದಲ್ಲಿ 1,643 ಮಿಲಿಯನ್ ಬ್ಯಾರೆಲ್ ಕಚ್ಛಾ ತೈಲ ಖರೀದಿ ಮಾಡುತ್ತಿದ್ದು, ಒಪೆಕ್ ನ ನಿರ್ಧಾರದಿಂದ ತೈಲ ಆಮದಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ ತೈಲೋತ್ಪನ್ನಗಳ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಮತ್ತು ಗಾಯದ ಮೇಲೆ ಉಪ್ಪು ಸವರಿದಂತೆ ಎಂಬಂತೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ತೈಲ ದರ ಏರಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com