ಆದಾಗ್ಯೂ ಇದುವರೆವಿಗೆ ಎಂಐಜಿ -I ವರ್ಗದವರಿಗೆ 120 ಚದರ ಮೀಟರ್ (1,291 ಚದರ ಅಡಿ) ಹಾಗೂ ಎಂಐಜಿ II ಗಾಗಿ 150 ಚದರ ಮೀಟರ್ (1,614 ಚದರ ಅಡಿ) ವ್ಯಾಪ್ತಿಯಲ್ಲಿರುವ ಮನೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತಿತ್ತು. ಈಗ ಎಂಐಜಿ -I ವರ್ಗದಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ 160 ಚದರ ಮೀಟರುಗಳು (1,722 ಚದರ ಅಡಿ) ಮತ್ತು ಎಂಐಜಿ II ಅವರಿಗೆ 200 ಚದರ ಮೀಟರ್ (2,152 ಚದರ ಅಡಿ) ವರೆಗೆ ಹೆಚ್ಚಳ ಮಾಡಲಾಗುತ್ತದೆ.