ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆ: ವರದಿ

ಆಟೋಮೊಬೈಲ್, ಕಟ್ಟಡ ನಿರ್ಮಾಣ, ಇಂಜಿನಿಯರಿಂಗ್ ಕ್ಷೇತ್ರಗಳಿಂದಾಗಿ ಏಪ್ರಿಲ್ ತಿಂಗಳ ನೇಮಕಾತಿಯ ಪ್ರಮಾಣವನ್ನು ಶೇ.21 ಕ್ಕೆ ಏರಿಕೆ ಮಾಡಿವೆ ಎಂದು ನೌಕರಿ.ಕಾಮ್ ನ ವೆಬ್ ಸೈಟ್ ವರದಿ ಮಾಡಿದೆ.
ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆ: ವರದಿ
ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆ: ವರದಿ
Updated on
ನವದೆಹಲಿ: ಆಟೋಮೊಬೈಲ್, ಕಟ್ಟಡ ನಿರ್ಮಾಣ, ಇಂಜಿನಿಯರಿಂಗ್ ಕ್ಷೇತ್ರಗಳಿಂದಾಗಿ ಏಪ್ರಿಲ್ ತಿಂಗಳ ನೇಮಕಾತಿಯ ಪ್ರಮಾಣವನ್ನು ಶೇ.21 ಕ್ಕೆ ಏರಿಕೆ ಮಾಡಿವೆ ಎಂದು ನೌಕರಿ.ಕಾಮ್ ನ ವೆಬ್ ಸೈಟ್ ವರದಿ ಮಾಡಿದೆ. 
ನೌಕರಿಯ ಜಾಬ್ ಸ್ಪೀಕ್ ಇಂಡೆಕ್ಸ್ ಪ್ರಕಾರ, ಕಳೆದ ವರ್ಷ ಕೈಗೊಳ್ಳಲಾದ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ  ಅನಿರೀಕ್ಷಿತ ಸ್ವಭಾವ ಕಂಡುಬಂದಿತ್ತು. ಆದರೆ ಈ ವರ್ಷ  ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆ ಕಾರಣವಾಗಲು ಆಟೋಮೊಬೈಲ್, ಕಟ್ಟಡ ನಿರ್ಮಾಣ, ಇಂಜಿನಿಯರಿಂಗ್ ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಿವೆ ಎಂದು ನೌಕರಿ.ಕಾಮ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿ ಸುರೇಶ್ ಹೇಳಿದ್ದಾರೆ. 
2018 ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಡುಬಂದ ಬೆಳವಣಿಗೆಯಿಂದಾಗಿ ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆಯಾಗಿದ್ದು ಇದು ಉತ್ತಮ ಆರ್ಥಿಕ ವರ್ಷಕ್ಕೆ ಮುನ್ನುಡಿಯಾಗಿದೆ ಎಂದು  ಆರ್ಥಿಕ ತಜ್ಞರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com