ನೋಟು ನಿಷೇಧ ಸಿಎಜಿ ವ್ಯಾಪ್ತಿಯ ಹೊರಗಿರುವ ಬ್ಯಾಂಕಿಂಗ್ ಹಾಗೂ ಹಣಕಾಸು ವಹಿವಾಟಿನ ವಿಷಯವಾಗಿದೆ, ಆದರೆ ಅದರಿಂದ ಉಂಟಾಗಿರಬಹುದಾದ ಆರ್ಥಿಕ ಪರಿಣಾಮಗಳ ಬಗ್ಗೆ ಆಡಿಟ್ ಅಥವಾ ಲೆಕ್ಕಪರಿಶೋಧನೆಯನ್ನು ಕೇಳುವುದು ತನ್ನ ವ್ಯಾಪ್ತಿಗೆ ಒಳಪಡುವ ವಿಷಯ ಪ್ರಮುಖವಾಗಿ ತೆರಿಗೆ ಆದಾಯಕ್ಕೆ ಸಂಬಂಧಿಸಿದಂತೆ ನೋಟು ನಿಷೇಧದಿಂದ ಉಂಟಾದ ಪರಿಣಾಮದ ಬಗ್ಗೆ ಆಡಿಟ್ ಕೇಳಬಹುದು ಎಂದು ಸಿಎಜಿ ಶಶಿಕಾಂತ್ ಶರ್ಮ ಈ ಹಿಂದೆ ಮಾಧ್ಯಮಗಳಿಗೆ ತಿಳಿಸಿದ್ದರು. ಈಗ ಸಿಎಜಿ ತಯಾರಿಸುತ್ತಿರುವ ವರದಿ ಬಜೆಟ್ ಅಧಿವೇಶನದ ವೇಳೆಗೆ ಸಿದ್ಧವಾಗಲಿದ್ದು, ಅದನ್ನು ಸರ್ಕಾರ ಸದನದಲ್ಲಿ ಮಂಡಿಸುತ್ತದೆಯೇ, ಇಲ್ಲವೇ ಎಂಬುದು ಕುತೂಹಲದ ವಿಷಯವಾಗಿದೆ.