ಪಿಎಂಎಂವಿವೈ ಯೋಜನೆ: 58 ಲಕ್ಷ ತಾಯಂದಿರಿಗೆ 1,600 ಕೋಟಿ ರು. ವರ್ಗಾಯಿಸಿದ ಕೇಂದ್ರ

Published On :
ನವದೆಹಲಿ: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಶುಕ್ರವಾರದವರೆಗೆ ಅರ್ಹ ಫಲಾನುಭವಿ ತಾಯಂದಿರಿಗೆ ಸರ್ಕಾರದಿಂದ 1,600 ಕೋಟಿ ರೂ. ವರ್ಗಾವಣೆಯಾಗಿದೆ ಎಂದು ಸೆಂಟರ್ ಫಾರ್ ಡಿಜಿಟಲ್ ಫೈನಾನ್ಶಿಯಲ್ ಇನ್ಕ್ಲೂಷನ್ (ಸಿಡಿಎಫ್ ಐ) ಹೇಳಿದೆ.
"58 ಲಕ್ಷ ಮಹಿಳೆಯರಿಗೆ ನೇರ ಲಾಭಾಂಶ ವರ್ಗಾವಣೆ ಮೂಲಕ 16,04,66,63,000 ರೂ. ಗಳನ್ನು ವರ್ಗಾವಣೆ ಮಾಡಲಾಗಿದೆ"
ಲಾಭರಹಿತ ಸಂಸ್ಥೆಯಾಗಿರುವ ಸಿಡಿಎಫ್ ಐ ಯು ಪಿಎಂಎಂವಿವೈ-ಸಿಎಎಸ್ (ಕಾಮನ್ ಅಪ್ಲಿಕೇಷನ್ ಸಾಫ್ಟ್ ವೇರ್) ಸಿಸ್ಟಮ್ ಮೂಲಕ ಈ ಹಣವನ್ನು ವರ್ಗಾವಣೆ ಮಾಡಿದೆ.
ಜನವರಿ 1, 2017ರಲ್ಲಿ ಪ್ರಾರಂಭವಾದ ಈ ಯೋಜನೆ ಮೂಲಕ ಮೊದಲ ಬಾರಿ ಗರ್ಭ ಧರಿಸುವ ಮಹಿಳೆಯರಿಗೆ ನೇರ ಲಾಭಾಂಶ ವರ್ಗಾವಣೆ (ಡಿಬಿಟಿ) ಮೂಲಕ ಮೂರು ಕಂತುಗಳಲ್ಲಿ 5000 ರೂ. ನಗದು ಉತ್ತೇಜನವನ್ನು ಒದಗಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PMMVYPradhan Mantri Matru Vandana YojanaPregnancy incentiveಪಿಎಂಎಂವಿವೈಪ್ರಧಾನ್ ಮಂತ್ರಿ ಮಾತೃಉ ವಂದನಾ ಯೋಜನೆತಾಯಂದಿರಿಗೆ ಪ್ರೋತ್ಸಾಹಧ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


