ಸೆನ್ಸೆಕ್ಸ್ 200 ಅಂಕ, ಡಾಲರ್ ಎದುರು ರೂಪಾಯಿ ಮೌಲ್ಯ 23 ಪೈಸೆ ಏರಿಕೆ

ಆಟೋ, ಲೋಹ, ಬ್ಯಾಂಕಿಂಗ್ ವಲಯದ ಷೇರು ಮಾರಾಟಗಳಲ್ಲಿ ಬುಧವಾರದ ಬೆಳಗಿನ ವಹಿವಾಟು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಆಟೋ, ಲೋಹ, ಬ್ಯಾಂಕಿಂಗ್ ವಲಯದ ಷೇರು ಮಾರಾಟಗಳಲ್ಲಿ ಬುಧವಾರದ ಬೆಳಗಿನ ವಹಿವಾಟು ಆರಂಭಕ್ಕೆ ಏರಿಕೆ ಕಂಡುಬಂದು ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ ಕಂಡುಬಂದಿದೆ.

ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 220.38 ಅಂಕ ಅಥವಾ ಶೇಕಡಾ 0.64 ಏರಿಕೆ ಕಂಡುಬಂದು 34,520ರಲ್ಲಿ ವಹಿವಾಟು ನಡೆಸಿತು.ಇಂದಿನ ವಹಿವಾಟಿನಲ್ಲಿ ಕೂಡ ಆಟೋ, ತೈಲ ಮತ್ತು ಅನಿಲ, ಲೋಹ, ಆರೋಗ್ಯವಲಯದಲ್ಲಿ ಷೇರು ಸಂವೇದಿ ಸೂಚ್ಯಂಕ ಶೇಕಡಾ 1.50ಯಷ್ಟು ಏರಿಕೆ ಕಂಡುಬಂದಿದೆ.

ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 45.55 ಅಂಕ ಏರಿಕೆ ಕಂಡುಬಂದು 10,346.60ರಲ್ಲಿ ವಹಿವಾಟು ನಡೆಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 23 ಪೈಸೆ ಏರಿಕೆಯಾಗಿ ರೂಪಾಯಿ ಮೌಲ್ಯ ಡಾಲರ್ ಎದುರು 74 ರೂಪಾಯಿ 16 ಪೈಸೆಯಷ್ಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com