ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ, ಸಾರ್ವಕಾಲಿಕ ಗರಿಷ್ಟ ದರ

ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದ್ದು, ತೈಲೋತ್ಪನ್ನಗಳ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮುಂಬೈ: ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದ್ದು, ತೈಲೋತ್ಪನ್ನಗಳ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
ಇಂದಿನ ದರದಂತೆ ಪೆಟ್ರೋಲ್ ದರದಲ್ಲಿ ಬರೊಬ್ಬರಿ 39 ಪೈಸೆಯಷ್ಟು ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 32 ಪೈಸೆಗಳಷ್ಟು ಏರಿಕೆ ಕಂಡುಬಂದಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ತೈಲ ದರ ಏರಿಕೆಯಾಗಿರುವುದು ಮತ್ತು ಡಾಲರ್ ಎದರು ರೂಪಾಯಿ ಮೌಲ್ಯ ತಳಮಟ್ಟಕ್ಕೆ ಕುಸಿದಿರುವುದೇ ತೈಲ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್ ಗೆ 79.40 ರೂ. ಹಾಗೂ ಡೀಸೆಲ್ ದರ 71.34 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್ ಗೆ 81.98 ರೂ. ಮತ್ತು ಡೀಸೆಲ್‌ ದರ 73.72 ರೂ. ಇದೆ. ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 82.31 ರೂ. ಮತ್ತು ಡೀಸೆಲ್ ಬೆಲೆ 74.27 ರೂ. ಗಳಾಗಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ ದರ 86.80 ರೂ. ಮತ್ತು ಡೀಸೆಲ್ ಬೆಲೆ 75.82 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ ಬೆಲೆ 82.51 ರೂ.,  ಡೀಸೆಲ್‌ ಬೆಲೆ 75.48 ರೂ. ಆಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಈ ವರ್ಷದ ಆರಂಭದಿಂದ ಇದುವರೆಗೆ ಕ್ರಮವಾಗಿ ಶೇಕಡ 13 ಮತ್ತು ಶೇಕಡ 19ರಷ್ಟು ಹೆಚ್ಚಿದೆ. ಅಮೆರಿಕದಲ್ಲಿ ತೈಲಕ್ಷೇತ್ರದಲ್ಲಿ ಕುಸಿಯುತ್ತಿರುವ ಹೂಡಿಕೆ, ಇರಾನ್ ಮೇಲಿನ ದಿಗ್ಭಂಧನ ಮತ್ತಿತರ ಕಾರಣಗಳಿಂದ ತೈಲಬೆಲೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ತೆರಿಗೆ ಪ್ರಮಾಣ 37% ಹಾಗೂ 47% ಇದ್ದು, ಡೀಲರ್ ಕಮಿಷನ್ 3.8% ಹಾಗೂ 4.8% ಇದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬ್ಕಾರಿ ಸುಂಕವನ್ನು ಒಂದು ರೂಪಾಯಿ ಕಡಿತಗೊಳಿಸಿದರೆ, ಬೊಕ್ಕಸಕ್ಕೆ 13 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com