ಮತ್ತೆ ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ರುಪಾಯಿ ಬೆಲೆ ಕುಸಿತ

ಡಾಲರ್ ಎದುರಿನ ರುಪಾಯಿ ಮೌಲ್ಯದ ಕುಸಿತ ಮುಂದುವರೆದಿದ್ದು, ಇಂದು ಮತ್ತೆ ರುಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮೊತ್ತಕ್ಕೆ ಕುಸಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಡಾಲರ್ ಎದುರಿನ ರುಪಾಯಿ ಮೌಲ್ಯದ ಕುಸಿತ ಮುಂದುವರೆದಿದ್ದು, ಇಂದು ಮತ್ತೆ ರುಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮೊತ್ತಕ್ಕೆ ಕುಸಿದಿದೆ.
ಡಾಲರ್‌ ಎದುರು ರೂಪಾಯಿ ಇಂದು ಷೇರು ಮಾರುಕಟ್ಟೆ ವಹಿವಾಟಿನ ನಡುವೆ ಸಾರ್ವಕಾಲಿಕ ದಾಖಲೆ ಕುಸಿತ ಕಂಡಿದ್ದು, ಡಾಲರ್ ಎದುರು ರೂಪಾಯಿ 16 ಪೈಸೆಗಳಷ್ಟು ಕುಸಿತ ಗೊಂಡಿದೆ. ಆ ಮೂಲಕ ಪ್ರತೀ ಡಾಲರ್ ಗೆ  71.37 ರೂಗಳಾಗಿದೆ. ಆ ಮೂಲಕ ಸಾರ್ವಕಾಲಿಕ ದಾಖಲೆಯ ತಳ ಮಟ್ಟಕ್ಕೆ ರೂಪಾಯಿ ಕುಸಿದಿದೆ. 
ಕಳೆದ ವಾರಾಂತ್ಯದ ವಹಿವಾಟಿನಲ್ಲಿ ಡಾಲರ್ ಹೆಚ್ಚು ಬೇಡಿಕೆ ಸೃಷ್ಟಿಯಾಗಿದ್ದೇ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಅಂತೆಯೇ ಸರಕು ಸಾಗಣೆ ವೆಚ್ಚಗಳ ದುಬಾರಿ ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 
ಕಳೆದ ವಾರಾಂತ್ಯದ ವಹಿವಾಟಿನಲ್ಲಿ ರೂಪಾಯಿ ಬರೊಬ್ಬರಿ 55 ಪೈಸೆಗಳಷ್ಟು ಕುಸಿತ ಕಂಡಿತ್ತು. 
ಇನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ದರ ಕೂಡ ಏರಿಕೆಯಾಗಿದ್ದು, ಇಂದಿನ ಸೆನ್ಸೆಕ್ಸ್ ಮತ್ತು ನಿಫ್ಟಿ ಅಂಶಗಳ ಅಲ್ಪ ಕುಸಿತ ಕೂಜ ರೂಪಾಯಿ ಮೌಲ್ಯದ ಕುಸಿತದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಇನ್ನು ನಕಾರಾತ್ಮಕ ವಹಿವಾಟಿನ ಹಿನ್ನಲೆಯಲ್ಲಿ ವಿದೇಶಿ ಹೂಡೆಕೆದಾರರು ಸುಮಾರು 21.13 ಕೋಟಿ ಮೌಲ್ಯದ ಷೇರುಗಳನ್ನು ಮಾರಲು ಮುಂದಾಗಿದ್ದು, ಭಾರತೀಯ ಷೇರುಮಾರುಕಟ್ಟೆಯ ಹಿನ್ನಡೆಗೆ ಕಾರಣ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com