2016ರ ಮಾರ್ಚ್ 2ರಂದು ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದು ಅದಾದ ನಾಲ್ಕು ದಿನಗಳ ನಂತರ 13 ಬ್ಯಾಂಕ್ ಗಳು ಸುಪ್ರೀಂಕೋರ್ಟ್ ಗೆ ದೂರು ಸಲ್ಲಿಸಿ, ಮಲ್ಯ ವಿದೇಶಕ್ಕೆ ಪರಾರಿಯಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಸಾಲ ವಸೂಲಾತಿಗೆ ವ್ಯವಸ್ಥೆ ಮಾಡಬೇಕು ಎಂದು ಕೋರಿ ಕೊಂಡಿದ್ದವು. ಆದರೆ ಅಷ್ಟರಲ್ಲಾಗಲೇ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದು ಬ್ಯಾಂಕ್ ಗಳು ನಂತರ ಎಚ್ಚೆತ್ತುಕೊಂಡಿವೆ ಎಂದು ಆರೋಪಿಸಲಾಗಿದೆ.