ನಿಧಾನಗತಿಯ ಆರ್ಥಿಕ ಬೆಳವಣಿಗೆ: ಜಿಎಸ್‍ಟಿ ಸಂಗ್ರಹ 98,202 ಕೋಟಿಗೆ ಇಳಿಕೆ!

ನಿಧಾನಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಆಗಸ್ಟ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) 98,202 ಕೋಟಿ ಸಂಗ್ರಹವಾಗಿದ್ದು ಜುಲೈ ತಿಂಗಳಿಗೆ ಹೋಲಿಸಿಕೊಂಡರೆ ಜಿಎಸ್‍ಟಿ ಸಂಗ್ರಹ ಇಳಿಮುಖವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ನಿಧಾನಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಆಗಸ್ಟ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) 98,202 ಕೋಟಿ ಸಂಗ್ರಹವಾಗಿದ್ದು ಜುಲೈ ತಿಂಗಳಿಗೆ ಹೋಲಿಸಿಕೊಂಡರೆ ಜಿಎಸ್‍ಟಿ ಸಂಗ್ರಹ ಇಳಿಮುಖವಾಗಿದೆ.

ಕಳೆದ ಜೂನ್ ನಲ್ಲಿ 99,939 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಜುಲೈನಲ್ಲಿ 1.2 ಲಕ್ಷ ಕೋಟಿ ರುಪಾಯಿ ಸಂಗ್ರಹವಾಗಿತ್ತು. ಜುಲೈಗೆ ಹೋಲಿಸಿಕೊಂಡರೆ ಜಿಎಸ್‍ಟಿ ಸಂಗ್ರಹದಲ್ಲಿ ಇಳಿಮುಖವಾಗಿದೆ. 

ಇನ್ನು 2018ರ ಆಗಸ್ಟ್ ನಲ್ಲಿ 93,960 ಕೋಟಿ ರುಪಾಯಿ ಸಂಗ್ರಹವಾಗಿತ್ತು. 2019ರ ಆಗಸ್ಟ್ ನಲ್ಲಿ 98,202 ಕೋಟಿ ರುಪಾಯಿ ಸಂಗ್ರಹವಾಗಿದ್ದು ಶೇಕಡ 4.5ರಷ್ಟು ಏರಿಕೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com