ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ ಭಾರತದ ಉದ್ಯಮಿ ಮುಖೇಶ್ ಅಂಬಾನಿ

ಭಾರತದ ಖ್ಯಾತ ಉದ್ಯಮಿ ಮುಖೇಶ್​ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 9 ಸ್ಥಾನ ಮೇಲಕ್ಕೆ ಜಿಗಿದಿದ್ದು, ಆ ಮೂಲಕ ಜಗತ್ತಿನ 5ನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ
Updated on

ಮುಂಬೈ: ಭಾರತದ ಖ್ಯಾತ ಉದ್ಯಮಿ ಮುಖೇಶ್​ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 9 ಸ್ಥಾನ ಮೇಲಕ್ಕೆ ಜಿಗಿದಿದ್ದು, ಆ ಮೂಲಕ ಜಗತ್ತಿನ 5ನೇ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್​ ಜಿಯೋ ಸಂಸ್ಥೆಯ ಮೇಲೆ ವಿದೇಶಿ ಸಂಸ್ಥೆಗಳು ನಿರಂತರವಾಗಿ ಹೂಡಿಕೆ ಮಾಡುತ್ತಿವೆ. ಹೀಗಾಗಿ, ರಿಲಯನ್ಸ್ ಸಂಸ್ಥೆ​ ಮೌಲ್ಯ ಹೆಚ್ಚುತ್ತಲೇ ಇದೆ. ಈ ಮೂಲಕ ಮುಖೇಶ್​ ​ ಅಂಬಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ವಾರೆನ್ ಭಪೆಟ್​ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ. ಸತತವಾಗಿ ಜಿಯೋ ಸಂಸ್ಥೆಯ ಮೇಲೆ ಹೂಡಿಕೆ ಆದ ಬೆನ್ನಲ್ಲೇ ರಿಲಾಯನ್ಸ್​ ಷೇರುಗಳ ಮೌಲ್ಯ ದ್ವಿಗುಣವಾಗಿದೆ. ಹೀಗಾಗಿ ಅಂಬಾನಿ ಆಸ್ತಿ ಮೌಲ್ಯ ಹೆಚ್ಚಿದೆ. ಈ ಮೊದಲು ಅಂಬಾನಿ ವಿಶ್ವದ ಏಳನೇ ಶ್ರೀಮಂತರಾಗಿದ್ದರು. ಇತ್ತೀಚೆಗೆ ಅವರು ಆರನೇ ಸ್ಥಾನಕ್ಕೆ ಜಿಗಿದಿದ್ದರು.

ಫೋರ್ಬ್ಸ್​​ನ ರಿಯಲ್​ ಟೈಮ್​ ಡೇಟಾದಲ್ಲಿ ಈ ಮಾಹಿತಿ ಲಭ್ಯವಾಗಿದ್ದು, ಪ್ರಸ್ತುತ ಅಂಬಾನಿ ಆಸ್ತಿ 5,59,734 ಕೋಟಿ ರೂಪಾಯಿ ಆದರೆ, ನಾಲ್ಕನೇ ಸ್ಥಾನದಲ್ಲಿರುವ ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​​ ಜುಕರ್​ಬರ್ಗ್ ಆಸ್ತಿ ಮೌಲ್ಯ 6,64,263 ಕೋಟಿ ರೂಪಾಯಿ ಆಗಿದೆ. ಬೆರ್ಜ್​ಶೈರ್​ ಹಾತ್​ವೇ ಇಂಕ್​ ಷೇರುಗಳು ಮೌಲ್ಯ ಕಳೆದುಕೊಳ್ಳಲು ಆರಂಭಿಸಿದ್ದವು. ಈ ಬೆನ್ನಲ್ಲೇ ವಾರೆನ್ ಭಪೆಟ್ ದೊಡ್ಡ ಪ್ರಮಾಣದ ಷೇರುಗಳನ್ನು ಮಾರಿದ್ದರು. ಈ ಬೆನ್ನಲ್ಲೇ ಭಪೆಟ್​ ಆಸ್ತಿ ಮೌಲ್ಯ ಕಡಿಮೆ ಆಗಿತ್ತು. ಹೀಗಾಗಿ ವಾರೆನ್​ ಸ್ಥಾನ ಕುಸಿದಿದೆ.

ಅಮೆಜಾನ್​​ ಸ್ಥಾಪಕ ಮತ್ತು ಸಿಇಒ ಜೆಫ್​ ಬೆಜೋಸ್​ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮೈಕ್ರೋಸಾಫ್ಟ್ ಸಹ​ ಸಂಸ್ಥಾಪಕ  ಬಿಲ್​ ಗೇಟ್ಸ್​ ಎರಡನೇ ಸ್ಥಾನದಲ್ಲಿದ್ದಾರೆ. LVMH ಸಂಸ್ಥೆಯ ಒಡೆಯ ಬರ್ನಾಟ್​ ಅರ್ನಾಡ್​ ಮೂರನೇ ಸ್ಥಾನದಲ್ಲಿದ್ದರೆ, ಫೇಸ್​ಬುಕ್​ ಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ನಾಲ್ಕು ಹಾಗೂ ಮುಖೇಶ್ ಅಂಬಾನಿ ಐದನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com