ಪೆಟ್ರೋಲ್-ಡೀಸೆಲ್ ದರ ಸತತ ಮೂರನೇ ದಿನವೂ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತುಸು ಹೆಚ್ಚಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತುಸು ಹೆಚ್ಚಿಸಿವೆ.

ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಇಂದು ಲೀಟರ್ ಗೆ 82 ರೂ ಮತ್ತು ಡೀಸೆಲ್ 72 ರೂ. ಗೆ ಏರಿದೆ. ಡೀಸೆಲ್‍ ದರವನ್ನು 26ರಿಂದ 28 ಪೈಸೆಯಷ್ಟು, ಪೆಟ್ರೋಲ್‍ ದರವನ್ನು ಲೀಟರ್ ಗೆ 21ರಿಂದ 24 ಪೈಸೆಯಷ್ಟು ಹೆಚ್ಚಿಸಲಾಗಿದೆ. 

ಶುಕ್ರವಾರ ದೇಶದ ನಾಲ್ಕು ಪ್ರಮುಖ ಮಹಾನಗರಗಳಲ್ಲಿ ಡೀಸೆಲ್ ದರವನ್ನು 22 ರಿಂದ 26 ಪೈಸೆ ಮತ್ತು ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 17 ರಿಂದ 19 ಪೈಸೆ ಹೆಚ್ಚಿಸಲಾಗಿತ್ತು.

ಸತತ ಐದು ದಿನಗಳವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದ ನಂತರ ನವೆಂಬರ್ 25 ರಂದು ಎರಡೂ ಇಂಧನಗಳ ದರಗಳು ಸ್ಥಿರವಾಗಿದ್ದವು.

ಹೆಚ್ಚಳದ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‍ ಗೆ 82.13 ರೂ., ಡೀಸೆಲ್ ದರ ಲೀಟರ್‌ಗೆ 72.13 ರೂ.ನಷ್ಟಿದೆ. ವಾಣಿಜ್ಯ ನಗರಿ ಮುಂಬೈ ನಲ್ಲಿ ಪೆಟ್ರೋಲ್ ಲೀಟರ್‌ಗೆ 88.81 ರೂ ಮತ್ತು ಡೀಸೆಲ್ ದರ ಲೀಟರ್‌ಗೆ 78.66 ರೂ.ನಷ್ಟಿದೆ. 

ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀಟರ್‌ಗೆ 83.67 ರೂ. ಮತ್ತು ಡೀಸೆಲ್ ದರ ಲೀಟರ್‌ 75.70 ರೂ. ಮತ್ತು ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 85.12 ರೂ., ಡೀಸೆಲ್ ದರ ಲೀಟರ್‌ಗೆ 77.56 ರೂ.ಗೆ ಏರಿಕೆಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com