ಪುತ್ರನ ಡ್ರಗ್ ಕೇಸಿನಿಂದ ಶಾರುಖ್ ಖಾನ್ ಜನಪ್ರಿಯತೆಗೆ ಧಕ್ಕೆಯಾಗಿಲ್ಲ: ಮಾರ್ಕೆಟ್ ಪರಿಣತರು

ಆರ್ಯನ್ ಖಾನ್ ಡ್ರಗ್ ಪ್ರಕರಣ ವರದಿಯಾದಾಕ್ಷಣ ಹಲವು ಸಂಸ್ಥೆಗಳು ಶಾರುಖ್ ನಟಿಸಿದ್ದ ಜಾಹೀರಾತುಗಳ ಪ್ರಸಾರಕ್ಕೆ ತಡೆಯೊಡ್ಡಿದ್ದವು. ಅವೆಲ್ಲಾ ಜಾಹೀರಾತುಗಳು ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣಲು ಶುರುಮಾಡಿವೆ. 
ಶಾರುಖ್ ಖಾನ್
ಶಾರುಖ್ ಖಾನ್
Updated on

ಮುಂಬೈ: ಭಾರತದ ಜನಪ್ರಿಯ ಹಾಗೂ ಜನರ ಪ್ರೀತಿ ಪಾತ್ರರಾದ ವ್ಯಕ್ತಿ ಶಾರುಖ್ ಖಾನ್. ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣದಿಂದಾಗಿ ಹಲವು ಬ್ರ್ಯಾಂಡ್ ಗಳು ಶಾರುಖ್ ಜೊತೆಗಿನ ಒಪ್ಪಂದಗಳನ್ನು ತಡೆಹಿಡಿದಿದ್ದವು. ಆದರೆ ಒಟ್ತಾರೆಯಾಗಿ ಶಾರುಖ್ ಜನಪ್ರಿಯತೆಗೆ ಡ್ರಗ್ ಪ್ರಕರಣದಿಂದ ಕುಂದು ಉಂಟಾಗಿಲ್ಲ ಎಂದು ಮಾರ್ಕೆಟ್ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಆರ್ಯನ್ ಖಾನ್ ಡ್ರಗ್ ಪ್ರಕರಣ ವರದಿಯಾದಾಕ್ಷಣ ಹಲವು ಸಂಸ್ಥೆಗಳು ಶಾರುಖ್ ನಟಿಸಿದ್ದ ಜಾಹೀರಾತುಗಳ ಪ್ರಸಾರಕ್ಕೆ ತಡೆಯೊಡ್ಡಿದ್ದವು. ಆದರೆ ಅವೆಲ್ಲಾ ಜಾಹೀರಾತುಗಳು ಒಂದರ ಹಿಂದೊಂದರಂತೆ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣಲು ಶುರುಮಾಡಿವೆ.

ಮಕ್ಕಳ ಶೈಕ್ಷಣಿಕ ಆಪ್ ಆದ ಬೈಜು ಸಂಸ್ಥೆಗೆ ಶಾರುಖ್ ಖಾನ್ ಅವರೇ ರಾಯಭಾರಿ. ಪುತ್ರನ ಡ್ರಗ್ ಪ್ರಕರಣ ವರದಿಯ ನಂತರವೂ ಬೈಜು ಸಂಸ್ಥೆ ತನ್ನ ಜಾಹಿರಾತನ್ನು ನಿಲ್ಲಿಸಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬೈಜು ಜಾಹಿರಾತುಗಳ ಪರ ಹಾಗೂ ವಿರೋಧದ ಚರ್ಚೆಗಳು ನಡೆದಿದ್ದವು.

ಟ್ವಿಟ್ತರ್ ನಲ್ಲಿ ಶಾರುಖ್ 4.2 ಕೋಟಿ ಹಿಂಬಾಲಕರನ್ನು ಪಡೆದಿದ್ದರೆ, ಇನ್ ಸ್ಟಾಗ್ರಾಂನಲ್ಲಿ 2.6 ಕೋಟಿ ಫಾಲೋವರ್ಸ್  ಅನ್ನು ಕಿಂಗ್ ಖಾನ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com