8470 ಕೋಟಿ ರೂಪಾಯಿ ಮೌಲ್ಯದ 2000 ರೂ ಮುಖಬೆಲೆ ನೋಟು ಇನ್ನೂ ಸಾರ್ವಜನಿಕರ ಬಳಿ: ಆರ್ ಬಿಐ

ಚಲಾವಣೆಯಲ್ಲಿದ್ದ 2000 ರೂ ಮುಖಬೆಲೆಯ ನೋಟುಗಳ ಪೈಕಿ ಶೇ.97.62 ರಷ್ಟು ವಾಪಸ್ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದಿದೆ ಎಂದು ಆರ್ ಬಿಐ ಹೇಳಿದೆ.
2000 ರೂಪಾಯಿ ನೋಟು
2000 ರೂಪಾಯಿ ನೋಟುonline desk

ಮುಂಬೈ: ಚಲಾವಣೆಯಲ್ಲಿದ್ದ 2000 ರೂ ಮುಖಬೆಲೆಯ ನೋಟುಗಳ ಪೈಕಿ ಶೇ.97.62 ರಷ್ಟು ವಾಪಸ್ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದಿದೆ ಎಂದು ಆರ್ ಬಿಐ ಹೇಳಿದೆ.

8,470 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ನೋಟುಗಳು ವಾಪಸ್ ಬರಬೇಕಿದ್ದು ಈ ವರೆಗೂ ಸಾರ್ವಜನಿಕರ ಬಳಿಯೇ ಇದೆ ಎಂದು ಬ್ಯಾಂಕ್ ಗಳ ನಿಯಂತ್ರಕ ಹೇಳಿದೆ. 2023 ರ ಮೇ.19 ರಂದು ಆರ್ ಬಿಐ 2000 ರೂ ಮುಖಬೆಲೆಯ ನೋಟುಗಳನ್ನು ಆರ್ ಬಿಐ ಚಲಾವಣೆಯಿಂದ ಹಿಂಪಡೆದಿತ್ತು.

2023 ರ ಮೇ.19 ರಂದು ಅಂತ್ಯಗೊಂಡ ವಹಿವಾಟಿನ ಅಂಕಿ-ಅಂಶಗಳ ಪ್ರಕಾರ, ಒಟ್ಟು ಚಲಾವಣೆಯಲ್ಲಿದ್ದ 2000 ರೂ ಮುಖಬೆಲೆಯ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂಪಾಯಿಗಳಾಗಿತ್ತು. ಈ ಅಂಕಿ-ಅಂಶ ಫೆ.29 ರ ವೇಳೆಗೆ 8,470 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿತ್ತು ಎಂದು ಆರ್ ಬಿಐ ತನ್ನ ಹೇಳಿಕೆಯ ಮೂಲಕ ತಿಳಿಸಿದೆ.

2000 ರೂಪಾಯಿ ನೋಟು
2000 ರೂ. ಮುಖಬೆಲೆಯ ಶೇ 97.26 ರಷ್ಟು ನೋಟು ಬ್ಯಾಂಕುಗಳಿಗೆ ವಾಪಸ್; 9,760 ಕೋಟಿ ರೂ. ಇನ್ನೂ ಸಾರ್ವಜನಿಕರ ಬಳಿ!

ಮೇ 19, 2023 ರಂತೆ ಚಲಾವಣೆಯಲ್ಲಿರುವ 2000 ರೂಪಾಯಿಗಳ ಬ್ಯಾಂಕ್‌ನೋಟುಗಳಲ್ಲಿ 97.62 ಪ್ರತಿಶತವು ಹಿಂತಿರುಗಿವೆ ಎಂದು ಆರ್ ಬಿಐ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com