ಅಮೆರಿಕ-ಇರಾನ್ ಮಧ್ಯೆ ಸಂಧಾನ ಏರ್ಪಡುತ್ತಾ?: ಆಶಾವಾದದಲ್ಲಿ ಭೌಗೋಳಿಕ-ರಾಜಕೀಯ ಸನ್ನಿವೇಶ; ಷೇರು ಮಾರುಕಟ್ಟೆ ವಹಿವಾಟು ಏರಿಕೆ

ಜಾಗತಿಕ ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ಹಾಗೂ ವಿದೇಶಿ ಹೂಡಿಕೆದಾರರಿಂದ ಹೊಸ ಹೂಡಿಕೆಗಳ ಪ್ರವಾಹವೂ ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಿದೆ.
Sensex, Nifty
ಸೆನ್ಸೆಕ್ಸ್, ನಿಫ್ಟಿ
Updated on

ಇಂದು ಗುರುವಾರ ಬೆಳಗಿನ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್ ಇ ಸೆನ್ಸೆಕ್ಸ್ ಮತ್ತು ಎನ್ ಎಸ್ ಇ ನಿಫ್ಟಿ ಏರಿಕೆ ಕಂಡವು. ಅಮೆರಿಕಾ–ಇರಾನ್ ಮಾತುಕತೆ ಮರು ಆರಂಭದ ಪ್ರಗತಿಯ ಬಗ್ಗೆ ಹೊಸ ಆಶಾವಾದ ಮೂಡಿದ ಪರಿಣಾಮ ತಕ್ಷಣದ ಭೌಗೋಳಿಕ ರಾಜಕೀಯ ಆತಂಕಗಳು ಕಡಿಮೆಯಾಗಿದ್ದು, ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವುದು ಮಾರುಕಟ್ಟೆಗೆ ಉತ್ತೇಜನ ನೀಡಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ಹಾಗೂ ವಿದೇಶಿ ಹೂಡಿಕೆದಾರರಿಂದ ಹೊಸ ಹೂಡಿಕೆಗಳ ಪ್ರವಾಹವೂ ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಿದೆ.

30 ಷೇರುಗಳ ಬಿಎಸ್ ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 619 ಅಂಕಗಳಷ್ಟು ಏರಿಕೆಯಾಗಿ 78,730.32ಕ್ಕೆ ತಲುಪಿತು. 50 ಷೇರುಗಳ ನಿಫ್ಟಿ 169.65 ಅಂಕಗಳಷ್ಟು ಏರಿಕೆಯಾಗಿ 24,400.95ಕ್ಕೆ ಏರಿಕೆಯಾಯಿತು.

ಸೆನ್ಸೆಕ್ಸ್‌ನ 30 ಕಂಪನಿಗಳಲ್ಲಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್ ಮತ್ತು ಇಂಟರ್ ಗ್ಲೋಬ್ ಏವಿಯೇಶನ್ ಪ್ರಮುಖ ಲಾಭ ಪಡೆದಿವೆ.

ಇನ್ನೊಂದೆಡೆ ಸನ್ ಫಾರ್ಮಾ ಮತ್ತು ಟೈಟಾನ್ ಕಂಪೆನಿ ಹಿನ್ನಡೆಯನ್ನು ಕಂಡವು. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 94.97 ಡಾಲರ್ ಆಗಿದ್ದು, 0.04% ಏರಿಕೆಯಾಗಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ದಕ್ಷಿಣ ಕೊರಿಯಾದ ಕೋಸ್ಪಿ, ಜಪಾನ್‌ನ ನಿಕ್ಕೈ 225, ಶಾಂಘೈ SSE ಕಾಂಪೋಸಿಟ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕಗಳು ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದವು. ಅಮೆರಿಕದ ಮಾರುಕಟ್ಟೆಗಳು ಹೆಚ್ಚಿನ ಮಟ್ಟದಲ್ಲಿ ಮುಕ್ತಾಯಗೊಂಡವು.

Sensex, Nifty
ಶಾಂತಿ ಮಾತುಕತೆ ಮುರಿದು ಬಿದ್ದರೂ ಮುಂದುವರೆದ ಪಾಕ್ ಪ್ರಯತ್ನ: ಇರಾನ್‌ಗೆ ತೆರಳಿದ ಮುನೀರ್ ನೇತೃತ್ವದ ನಿಯೋಗ!

ಎನ್‌ರಿಚ್ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್, ಅಮೆರಿಕಾ–ಇರಾನ್ ಮಾತುಕತೆಗಳ ಮರು ಆರಂಭದ ಬಗ್ಗೆ ಆಶಾವಾದ ಹೆಚ್ಚಿದ ಪರಿಣಾಮ ಭೌಗೋಳಿಕ ರಾಜಕೀಯ ಆತಂಕಗಳು ಕಡಿಮೆಯಾಗಿವೆ ಮತ್ತು ಹೂಡಿಕೆದಾರರ ಅಪಾಯ ಸ್ವೀಕಾರ ಮನೋಭಾವ ಹೆಚ್ಚಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ 94–95 ಡಾಲರ್ ನಡುವಿನ ಮಟ್ಟದಲ್ಲಿ ಸ್ಥಿರವಾಗಿರುವುದು ದೇಶೀಯ ಮಾರುಕಟ್ಟೆಗೆ ಒಳ್ಳೆಯ ಸೂಚನೆಯಾಗಿದೆ ಎಂದರು.

ಬುಧವಾರ ವಿದೇಶಿ ಸಂಸ್ಥಾನಿಕ ಹೂಡಿಕೆದಾರರು (FIIs) 666.15 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಹಿಂದೆ ಹೆಚ್ಚಿದ ತೈಲ ಬೆಲೆ ಮತ್ತು ಜಿಯೋಪಾಲಿಟಿಕಲ್ ಅನಿಶ್ಚಿತತೆಯಿಂದಾಗಿ FIIs ನಿರಂತರವಾಗಿ ಹೂಡಿಕೆ ಹೊರತೆಗೆದಿದ್ದರು. ಆದರೆ ಇತ್ತೀಚಿನ ಅವಧಿಯಲ್ಲಿ ಸ್ಥಿರತೆ ಕಾಣಿಸಿಕೊಂಡಿದ್ದು, ಅವರು ಮತ್ತೆ ಖರೀದಿದಾರರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com