ಹೂಡಿಕೆದಾರರಿಗೆ ಬಂಪರ್ ಸುದ್ದಿ: ₹30,213 ಕೋಟಿ ಮೊತ್ತದ Jio IPO ಘೋಷಣೆ; ಇಲ್ಲಿದೆ ಸಂಪೂರ್ಣ ವಿವರ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಟೆಲಿಕಾಂ ಮತ್ತು ಡಿಜಿಟಲ್ ವಿಭಾಗವಾದ ಜಿಯೋ ಪ್ಲಾಟ್​ಫಾರ್ಮ್ಸ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಅಧಿಕೃತವಾಗಿ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಸಲ್ಲಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
Jio Platforms ipo
30,213 ಕೋಟಿ ರೂ. ಮೊತ್ತದ Jio IPO ಘೋಷಣೆOnline Desk
Updated on: 

ಮುಂಬೈ (ಮಹರಾಷ್ಟ್ರ): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಟೆಲಿಕಾಂ ಮತ್ತು ಡಿಜಿಟಲ್ ವಿಭಾಗವಾದ ಜಿಯೋ ಪ್ಲಾಟ್​ಫಾರ್ಮ್ಸ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಅಧಿಕೃತವಾಗಿ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಸಲ್ಲಿಕೆ ಮಾಡಿದೆ. ಇದು ಒಟ್ಟು ₹30,213 ಕೋಟಿ ಮೌಲ್ಯದ ಸಾರ್ವಜನಿಕ ಕೊಡುಗೆಯಾಗಿದ್ದು, ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಎಂಬ ಐತಿಹಾಸಿಕ ದಾಖಲೆ ಬರೆಯಲು ಸಜ್ಜಾಗಿದೆ. ಆ ಕುರಿತ ವರದಿ ಇಲ್ಲಿದೆ:

ಶೇರು ಬೆಲೆ ಹಾಗೂ ಕನಿಷ್ಠ ಹೂಡಿಕೆ ಎಷ್ಟು?

  • ಷೇರಿನ ಬೆಲೆ ಶ್ರೇಣಿ: ಪ್ರತಿ ಷೇರಿಗೆ ₹1,065 ರಿಂದ ₹1,119.

  • ಲಾಟ್ ಸೈಜ್: ಕನಿಷ್ಠ 12 ಷೇರುಗಳು.

  • ಕನಿಷ್ಠ ಹೂಡಿಕೆ ಮೊತ್ತ: ಸಾರ್ವಜನಿಕರು ಒಂದು ಲಾಟ್‌ಗೆ ಅರ್ಜಿ ಸಲ್ಲಿಸಲು ಕನಿಷ್ಠ ₹13,428 ಹೂಡಿಕೆ ಮಾಡಬೇಕಾಗುತ್ತದೆ.

ಪ್ರಮುಖ ದಿನಾಂಕಗಳು:

  • ಐಪಿಒ ಆರಂಭ: ಅಕ್ಟೋಬರ್ 21, 2026 (ಬುಧವಾರ)

  • ಐಪಿಒ ಮುಕ್ತಾಯ: ಅಕ್ಟೋಬರ್ 23, 2026 (ಶುಕ್ರವಾರ)

  • ಷೇರು ಹಂಚಿಕೆ: ಅಕ್ಟೋಬರ್ 26, 2026

  • ಷೇರು ಮಾರುಕಟ್ಟೆ ಪ್ರವೇಶ: ಅಕ್ಟೋಬರ್ 28, 2026

Jio Platforms ipo
ಜಿಯೋ v/s ಏರ್‌ಟೆಲ್ v/s ಸ್ಟಾರ್‌ಲಿಂಕ್‌: ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಕ್ರಾಂತಿಗೆ ಪ್ರಾಬ್ಲಂ ಏನು?

ಐಪಿಒನ ಪ್ರಮುಖ ವಿಶೇಷತೆಗಳು:

  • 100% ಹೊಸ ಷೇರುಗಳು:

    ಈ ಐಪಿಒ ಮೂಲಕ ಸಂಗ್ರಹವಾಗುವ ಸಂಪೂರ್ಣ ಬಂಡವಾಳವು ಹೊಸ ಷೇರುಗಳ ವಿತರಣೆಯದ್ದಾಗಿದ್ದು, ಯಾವುದೇ ಆಫರ್ ಫಾರ್ ಸೇಲ್ (OFS) ಇರುವುದಿಲ್ಲ. ಈ ಹಣವನ್ನು ಕಂಪನಿಯ ಭವಿಷ್ಯದ ಅಭಿವೃದ್ಧಿ ಹಾಗೂ ಸಾಲ ಮರುಪಾವತಿಗೆ ಬಳಸಲಾಗುತ್ತದೆ.

  • ರಿಲಯನ್ಸ್ ಷೇರುದಾರರಿಗೆ ಭರ್ಜರಿ ಕೊಡುಗೆ:

    ರಿಲಯನ್ಸ್ ಇಂಡಸ್ಟ್ರೀಸ್‌ನ (RIL) ಹಾಲಿ ಅರ್ಹ ಷೇರುದಾರರಿಗಾಗಿ ₹2,500 ಕೋಟಿ ಮೌಲ್ಯದ ಷೇರುಗಳನ್ನು ಕಾಯ್ದಿರಿಸಲಾಗಿದೆ. ಅಕ್ಟೋಬರ್ 14, 2026 ರೊಳಗೆ RIL ಷೇರು ಹೊಂದಿರುವವರು ಈ ಕೋಟಾದಡಿ ಅರ್ಜಿ ಸಲ್ಲಿಸಬಹುದು.

  • ಉದ್ಯೋಗಿಗಳಿಗೆ ವಿಶೇಷ ರಿಯಾಯಿತಿ:

    ಕಂಪನಿಯ ಉದ್ಯೋಗಿಗಳಿಗೆ ₹500 ಕೋಟಿ ಮೌಲ್ಯದ ಷೇರುಗಳನ್ನು ಮೀಸಲಿಡಲಾಗಿದ್ದು, ಪ್ರತಿ ಷೇರಿಗೆ ₹54 ರಿಯಾಯಿತಿ ಘೋಷಿಸಲಾಗಿದೆ.

ಈ ಹಣವನ್ನು ಜಿಯೋ ಎಲ್ಲಿ ಬಳಸಲಿದೆ?

ಸಂಗ್ರಹವಾಗಲಿರುವ ಒಟ್ಟು ಮೊತ್ತದಲ್ಲಿ ಸುಮಾರು ₹27,500 ಕೋಟಿ ಹಣವನ್ನು ಜಿಯೋ ಪ್ಲಾಟ್​ಫಾರ್ಮ್ಸ್‌ನ ಪ್ರಮುಖ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್  ಹೊಂದಿರುವ ಹಳೆಯ ಸಾಲಗಳನ್ನು ಸಂಪೂರ್ಣ ಅಥವಾ ಭಾಗಶಃ ಮರುಪಾವತಿ ಮಾಡಲು ಬಳಸಲಾಗುತ್ತದೆ. ಉಳಿದ ಹಣವನ್ನು ಕಂಪನಿಯ ಸಾಮಾನ್ಯ ಕಾರ್ಪೊರೇಟ್ ಅಗತ್ಯಗಳಿಗಾಗಿ ಬಳಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com