ಷೇರುಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 5.47 ಲಕ್ಷ ಕೋಟಿ ರೂ. ನಷ್ಟಹಣದುಬ್ಬರ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಭಾರತೀಯ ಷೇರುಮಾರುಕಟ್ಟೆ ಕುಸಿತದತ್ತ ಮುಖ ಮಾಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 1500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಹೂಡಿಕೆದಾರರ 5.47 ಲಕ್ಷ ಕೋಟಿ ರೂ ನಷ್ಟವಾಗಿದೆ.
ದಾಖಲೆ ಕನಿಷ್ಟ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿತ ಪ್ರತಿ ಡಾಲರ್ ಗೆ 78 ರೂ.ಏರುತ್ತಿರುವ ಹಣದುಬ್ಬರದ ವಿರುದ್ಧ ಹೋರಾಡುವ ಉದ್ದೇಶದಿಂದ ಈ ವಾರ ನಿರೀಕ್ಷಿತ ಅಮೆರಿಕ ಬಡ್ಡಿದರ ಏರಿಕೆಗೆ ಮುಂಚಿತವಾಗಿಯೇ ಭಾರತೀಯ ರೂಪಾಯಿ ಮೌಲ್ಯ ಸೋಮವಾರ ದಾಖಲೆಯ ಮಟ್ಟಕ್ಕೆ ಕುಸಿದಿದೆ.
ಜವಳಿ ವ್ಯಾಪಾರಿಗಳಿಗೆ ಬಿಗ್ ರಿಲೀಫ್: ಜಿಎಸ್ಟಿ ಹೆಚ್ಚಿಸುವ ನಿರ್ಧಾರ ಮುಂದೂಡಿದ ಕೇಂದ್ರಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು ಶೇಕಡಾ 5 ರಿಂದ ಶೇಕಡಾ 12ಕ್ಕೆ ಏರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಮುಂದೂಡಿದ್ದು, ಟೆಕ್ಸ್ ಟೈಲ್ ವ್ಯಾಪಾರಿಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಬ್ರಿಟನ್ ನ ಬ್ಯಾಟರಿ ಸಂಸ್ಥೆಯನ್ನು 100 ಮಿಲಿಯನ್ ಜಿಬಿಪಿಗೆ ಖರೀದಿಸಿದ ರಿಲಾಯನ್ಸ್ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳಿಗೆ ಖರೀದಿಸಿದೆ
ಐಟಿಯಿಂದ 2020 ರ ಐಆರ್ ಟಿಎಸ್ ದೃಢೀಕರಣಕ್ಕೆ ಗಡುವು ವಿಸ್ತರಣೆ2019-20 ನೇ ಆರ್ಥಿಕ ವರ್ಷದಲ್ಲಿ ಐಟಿಆರ್ ಎಸ್ ದೃಢೀಕರಣ ಮಾಡದೇ ಇರುವ ತೆರಿಗೆ ಪಾವತಿದಾರರಿಗೆ ನೀಡಲಾಗಿದ್ದ ಗಡುವನ್ನು 2022 ರ ಫೆ.28 ವರೆಗೆ ವಿಸ್ತರಿಸಲಾಗಿದೆ.
ಡಿ.30ಕ್ಕೆ ರಾಜ್ಯದ ಹಣಕಾಸು ಸಚಿವರೊಂದಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವ ಸಭೆಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಸೆಂಬರ್ 30 ರಂದು ರಾಜ್ಯಗಳ ಹಣಕಾಸು ಸಚಿವರೊಂಜಿಗೆ ಬಜೆಟ್ ಪೂರ್ವ ಭಾವಿ ಸಭೆ ನಡೆಸಲಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಡಿಸೆಂಬರ್ 30 ರಂದು ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2022 ಹಣಕಾಸು ವರ್ಷದ ಮೊದಲಾರ್ಧದಲ್ಲಿ 36,342 ಕೋಟಿ ರೂ. ಮೊತ್ತದ 4,071 ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿ ಐ2020-21ರ ಹಣಕಾಸು ವರ್ಷದಲ್ಲಿ ಒಟ್ಟು 7,363 ಪ್ರಕರಣಗಳು ದಾಖಲಾಗಿದ್ದವು. ವಂಚಿಸಲ್ಪಟ್ಟ ಒಟ್ಟು ಮೊತ್ತ 1,38,422 ಕೋಟಿ ರೂ. ಗಳಾಗಿತ್ತು.
ಸುಪ್ರೀಂ ಕೋರ್ಟ್ ಆದೇಶಿಸಿದ್ದ ಮೊತ್ತವನ್ನು ಸಹಾರಾ ಸಂಸ್ಥೆ ಪಾವತಿಸಿಲ್ಲ: ಸೆಬಿ ಮುಖ್ಯಸ್ಥಆಗಸ್ಟ್ 2012ರಲ್ಲಿ ಸೆಬಿಗೆ 25,781 ಕೋಟಿ ರೂ. ಪಾವತಿಸುವಂತೆ ಸುಪ್ರೀಂ ಕೋರ್ಟ್ ಸಹಾರಾ ಸಂಸ್ಥೆಗೆ ಆದೇಶಿಸಿತ್ತು.
ಡಿಸೆಂಬರ್ 26 ರವರೆಗೂ ಸುಮಾರು 4.51 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆಡಿಸೆಂಬರ್ 26ರವರೆಗೂ 2020-21ನೇ ಸಾಲಿಗಾಗಿ ಸುಮಾರು 4.51 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ನೋಂದಣಿಯಾಗಿರುವುದಾಗಿ ಆದಾಯ ತೆರಿಗೆ ಇಲಾಖೆ ಸೋಮವಾರ ಹೇಳಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನ: ಇದುವರೆಗೂ 4.51 ಕೋಟಿಗೂ ಅಧಿಕ ಅರ್ಜಿ ನೋಂದಣಿ2019-20 ಆರ್ಥಿಕ ವರ್ಷದಲ್ಲಿ 5.95 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿತ್ತು.
ಸಿಸಿಐ ಆರೋಪಕ್ಕೆ ಉತ್ತರಿಸಲು ಕಾಲಾವಕಾಶ ಕೋರಿದ ಗೂಗಲ್: ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಗೂಗಲ್ ಪ್ಲೇ ಸ್ಟೋರಿನಲ್ಲಿ ಆರೋಗ್ಯಕರ ಸ್ಪರ್ಧಾತ್ಮಕತೆಗೆ ವಿರುದ್ಧವಾದ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಗೂಗಲ್ ವಿರುದ್ಧ ಕೇಳಿಬಂದಿತ್ತು.
ಗ್ರಾಹಕರಿಗೆ ಸಿಹಿಸುದ್ದಿ: ಅಡುಗೆ ಎಣ್ಣೆ ಬೆಲೆಯನ್ನು ಶೇ. 10-15ರಷ್ಟು ಕಡಿತಗೊಳಿಸಿದ ಕಂಪನಿಗಳು!ಅದಾನಿ ವಿಲ್ಮಾರ್ ಮತ್ತು ರುಚಿ ಸೋಯಾ ಸೇರಿದಂತೆ ಪ್ರಮುಖ ಖಾದ್ಯ ತೈಲ ಕಂಪನಿಗಳು ತಮ್ಮ ಉತ್ಪನ್ನಗಳ ಗರಿಷ್ಠ ರಿಟೇಲ್ ದರವನ್ನು(ಎಂಆರ್ಪಿ) ಶೇ. 10-15ರಷ್ಟು ಕಡಿಮೆ ಮಾಡಿವೆ ಎಂದು ಉದ್ಯಮ ಸಂಸ್ಥೆ ಸಾಲ್ವೆಂಟ್ ಎಕ್ಸ್ಟ್ರ್ಯಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎಸ್ಇಎ) ಸೋಮವಾರ ತಿಳಿಸಿದೆ.
ಮೊದಲ ಬಾರಿಗೆ ಜಗತ್ತಿನ ಆರ್ಥಿಕತೆ 100 ಟ್ರಿಲಿಯನ್ ಡಾಲರ್ ದಾಟಲಿದೆ: ವರದಿಇದೇ ಮೊದಲ ಬಾರಿಗೆ ವಿಶ್ವದ ಆರ್ಥಿಕತೆಯು ಮುಂದಿನ ವರ್ಷ 100 ಟ್ರಿಲಿಯನ್ ಡಾಲರ್ (ಸುಮಾರು 7,539 ಲಕ್ಷ ಕೋಟಿ ರೂ) ದಾಟಲಿದೆ ಎಂದು ವರದಿಯೊಂದು ಹೇಳಿದೆ.
ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ಜನವರಿಯಲ್ಲಿ 16 ದಿನ ಬ್ಯಾಂಕಿಂಗ್ ಸೇವೆ ಅಲಭ್ಯ!!!ನೂತನ ವರ್ಷಾರಂಭದಲ್ಲೇ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದು ಇದ್ದು, ಜನವರಿ ತಿಂಗಳಲ್ಲಿ ಬರೊಬ್ಬರಿ 16 ದಿನಗಳ ಕಾಲ ಬ್ಯಾಂಕ್ ಗಳನ್ನು ಮುಚ್ಚಲಾಗುತ್ತಿದೆ.
ವಿಪ್ರೊ ಸಂಸ್ಥೆಯಿಂದ ಉದ್ಯೋಗ ನೇಮಕಾತಿ ಕಾರ್ಯಕ್ರಮ: ಎಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನಿಷ್ಟ ಶೇ.60 ಪ್ರತಿಶತ ಪಡೆದಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯಸ್ಸು 25 ಮೀರಿರಬಾರದು. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಜನವರಿ 31, 2022.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!