ವಾಣಿಜ್ಯ

ಗ್ರಾಹಕರಿಗೆ ಗುಡ್ ನ್ಯೂಸ್: ಏ.20ರಿಂದ ಮೊಬೈಲ್, ಟಿವಿ, ರೆಫ್ರಿಜರೇಟರ್ ಇ-ಮಾರುಕಟ್ಟೆಯಲ್ಲಿ ಲಭ್ಯ!

ಗ್ರಾಹಕರಿಗೆ ಗುಡ್ ನ್ಯೂಸ್ ಒಂದು ಹೊರಬಂದಿದೆ. ಕೊರೋನಾವೈರಸ್ ಲಾಕ್ ಡೌನ್ ನಡುವೆ ಏಪ್ರಿಲ್ 20 ರಿಂದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ನಂತಹ ಇ- ಕಾಮರ್ಸ್ ವೇದಿಕೆಗಳಲ್ಲಿ ಮೊಬೈಲ್ ಪೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಮತ್ತು ಸ್ಯಾನಿಟೈಸರಿ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ.

ಗ್ರಾಹಕರಿಗೆ ಗುಡ್ ನ್ಯೂಸ್: ಏ.20ರಿಂದ ಮೊಬೈಲ್, ಟಿವಿ, ರೆಫ್ರಿಜರೇಟರ್ ಇ-ಮಾರುಕಟ್ಟೆಯಲ್ಲಿ ಲಭ್ಯ!
ಮನೆಯಿಂದ ಕೆಲಸ ಮಾಡಿದವರಿಗೆ, 15 ಸಾವಿರಕ್ಕಿಂತ ಕಡಿಮೆ ವೇತನ ಇರುವವರಿಗೆ ಪೂರ್ತಿ ವೇತನ: ಎಫ್‌ಕೆಸಿಸಿಐ

ಮನೆಯಿಂದ ಕೆಲಸ ಮಾಡಿದವರಿಗೆ, 15 ಸಾವಿರಕ್ಕಿಂತ ಕಡಿಮೆ ವೇತನ ಇರುವವರಿಗೆ ಪೂರ್ತಿ ವೇತನ: ಎಫ್‌ಕೆಸಿಸಿಐ

ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮನೆಯಿಂದಲೇ ಕೆಲಸ ಮಾಡಿದವರಿಗೆ ಪೂರ್ತಿ ವೇತನ ನೀಡಬೇಕು. 15 ಸಾವಿರಕ್ಕಿಂತ ಒಳಗಿನ ವೇತನದಾರರಿಗೆ ಕೆಲಸ ಮಾಡದೇ ಇದ್ದರೂ ಪೂರ್ತಿ ವೇತನ ಪಾವತಿಸುವಂತೆ ರಾಜ್ಯ ಕೈಗಾರಿಕೆ ವಾಣಿಜ್ಯ ಮಹಾ ಸಂಸ್ಥೆ (ಎಫ್ ಕೆ ಸಿ ಸಿ ಐ) ಸೂಚನೆ ನೀಡಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್ ತಿಳಿಸಿದ್ದಾರೆ.

ಕೋವಿಡ್-19: ಪಿಪಿಎಫ್, ಸುಕನ್ಯಾ ಸಮೃದ್ಧಿ ಕನಿಷ್ಠ ಠೇವಣಿ ಅವಧಿ ವಿಸ್ತರಣೆ

ಕೋವಿಡ್-19: ಪಿಪಿಎಫ್, ಸುಕನ್ಯಾ ಸಮೃದ್ಧಿ ಕನಿಷ್ಠ ಠೇವಣಿ ಅವಧಿ ವಿಸ್ತರಣೆ

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಡಿ ಯಲ್ಲಿ ಕಡ್ಡಾಯವಾಗಿ ಇಡಬೇಕಾದ ಕನಿಷ್ಠ ಠೇವಣಿ ಮೊತ್ತದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಮದ್ಯ ಉದ್ಯಮ: ಆನ್‌ಲೈನ್ ಮಾರಾಟಕ್ಕೆ ಅವಕಾಶ ಕೋರಿ ಸಿಐಬಿಎಸಿ ಕೇಂದ್ರಕ್ಕೆ ಮನವಿ

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಮದ್ಯ ಉದ್ಯಮ: ಆನ್‌ಲೈನ್ ಮಾರಾಟಕ್ಕೆ ಅವಕಾಶ ಕೋರಿ ಸಿಐಬಿಎಸಿ ಕೇಂದ್ರಕ್ಕೆ ಮನವಿ

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಒತ್ತಡ ಮತ್ತು ಉದ್ಯೋಗ ನಷ್ಟವನ್ನು ಎದುರಿಸುತ್ತಿರುವ ಮದ್ಯ ಮಾರಾಟ ಹಾಗೂ ತಯಾರಿಕಾ ಸಂಸ್ಥೆಗಳ ಚೇತರಿಕೆಗಾಗಿ ಆಲ್ಕೋಹಾಲ್ ಯುಕ್ತಪಾನೀಯ ಉದ್ಯಮವನ್ನು ಹಂತಹಂತವಾಗಿ ತೆರೆಯಲು ಅನುಮತಿ ನೀಡುವಂತೆ ಮದ್ಯ ಉತ್ಪಾದನಾ ಸಂಘ ಸಿಐಬಿಎಸಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಒತ್ತಾಯಿಸಿದೆ.

ಕೊರೋನಾ ಹೊಡೆತಕ್ಕೆ ರಫ್ತು ವಲಯದಲ್ಲಿ 15 ಮಿಲಿಯನ್ ಉದ್ಯೋಗ ನಷ್ಟ ಸಾಧ್ಯತೆ!

ಕೊರೋನಾ ಹೊಡೆತಕ್ಕೆ ರಫ್ತು ವಲಯದಲ್ಲಿ 15 ಮಿಲಿಯನ್ ಉದ್ಯೋಗ ನಷ್ಟ ಸಾಧ್ಯತೆ!

ಕೊರೋನಾ ವೈರಸ್ ಹೊಡೆತಕ್ಕೆ ಜಗತ್ತೇ ತತ್ತರಿಸಿ ಹೋಗಿದೆ. ಇದರಿಂದ ಜಾಗತಿಕ ವ್ಯಾಪಾರದ ಮೇಲೆ ಕಾರ್ಮೋಡ ಆವರಿಸಿದ್ದು ಇದರ ಮುನ್ಸೂಚನೆಯಂತೆ ಭಾರತದ ರಫ್ತು ಕ್ಷೇತ್ರದಲ್ಲಿ ಸುಮಾರು 15 ಮಿಲಿಯನ್ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದು ರಫ್ತುದಾರರ ಸಂಸ್ಥೆ ಎಫ್ಐಇಒ ತಿಳಿಸಿದೆ.