

ವಿದ್ಯಾ ಬಾಲನ್ ಮತ್ತು ದೀಪಿಕಾ ಪಡುಕೋಣೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಬಿಟೌನ್ ಅಂಗಳದಿಂದ ಬಂದಿದೆ. ರಾಜೀವ್ ಮೆನನ್ ನಿರ್ದೇಶನದ, ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮೀ ಜೀವನಕಥೆ ಆಧಾರಿತ ಸಿನಿಮಾದಲ್ಲಿ ಇಬ್ಬರನ್ನೂ ಕಾಣಬಹುದು. ಸುಬ್ಬುಲಕ್ಷ್ಮೀ ಪಾತ್ರವನ್ನು ವಿದ್ಯಾ ನಿರ್ವಹಿಸಲಿದ್ದು, ಅವರ ಸಹೋದರಿ ಬಾಲಾ ಆಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾಳೆ. ನಿರ್ದೇಶಕ ಮೆನನ್ ಇಬ್ಬರಿಗೂ ಸಮಾನ ಪ್ರಾಮುಖ್ಯತೆ ನೀಡಿ ಚಿತ್ರಕಥೆ ಬರೆಯುತ್ತಿದ್ದಾರಂತೆ.
ಇಬ್ಬರು ಸ್ಟಾರ್ನಟಿಯರು ಒಂದೇ ಸಿನಿಮಾದಲ್ಲಿ ನಟಿಸಲು ಒಪ್ಪುವುದು ವಿರಳ ಎನ್ನುವುದು ಖರೆ. ಇತ್ತೀಚೆಗೆ ತೆರೆ ಕಂಡ 'ರೇಸ್ 2'ದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾಕೆಲಿನ್ ಫರ್ನಾಂಡಿಸ್ ಜತೆಯಾಗಿ ನಟಿಸಿದ್ದರು.